ಕರ್ನಾಟಕ

karnataka

ETV Bharat / state

ಜೀ ಅಕಾಡೆಮಿಯಿಂದ ನಟನೆ, ನಿರ್ದೇಶನದ ತರಬೇತಿ: ಎಸ್. ಗುರು ದೇಶಪಾಂಡೆ - latest news of bangalore

ಎಸ್.ಗುರು ದೇಶಪಾಂಡೆ ಜೀ ಅಕಾಡೆಮಿ ಆರಂಭಿಸಲು ಸಿದ್ಧರಾಗಿದ್ದು, ಇದೇ ಅಕ್ಟೋಬರ್ 14ರಂದು ಜೀ ಅಕಾಡೆಮಿಯನ್ನು ರೋರಿಂಗ್ ಸ್ಟಾರ್ ಶ್ರೀಮುರುಳಿ ಉದ್ಘಾಟಿಸಲಿದ್ದಾರೆ.

ನಟನೆ, ನಿರ್ದೇಶನ ತರಬೇತಿ ನೀಡಲಿದೆ ಜೀ ಅಕಾಡೆಮಿ : ಎಸ್.ಗುರುದೇಶ್ ಪಾಂಡೆ

By

Published : Oct 13, 2019, 9:46 AM IST

ಬೆಂಗಳೂರು: ನಿರ್ದೇಶನದ ಜೊತೆಗೆ ನಿರ್ಮಾಣಕ್ಕೂ ಕೈಹಾಕಿರುವ ಎಸ್. ಗುರು ದೇಶಪಾಂಡೆ ಅವರು ಜೀ ಅಕಾಡೆಮಿ ಆರಂಭಿಸಲು ಸಿದ್ಧರಾಗಿದ್ದು, ಇದೇ ಅಕ್ಟೋಬರ್ 14ರಂದು ಜೀ ಅಕಾಡೆಮಿಯನ್ನು ರೋರಿಂಗ್ ಸ್ಟಾರ್ ಶ್ರೀಮುರುಳಿ ಉದ್ಘಾಟಿಸಲಿದ್ದಾರೆ.

ಜೀ ಟೀಂ ಜೊತೆ ಸುದ್ದಿಗೋಷ್ಟಿ ನಡೆಸಿದ ಗುರು ದೇಶಪಾಂಡೆ, ಜೀ ಅಕಾಡೆಮಿಯಲ್ಲಿ ನಟನೆ, ನಿರ್ದೇಶನ, ಎಡಿಟಿಂಗ್, ಛಾಯಾಗ್ರಹಣ ತರಬೇತಿ ನೀಡುವ ಮೂರು ತಿಂಗಳ ಕೋರ್ಸ್ ಇರಲಿದ್ದು, ಚಿತ್ರರಂಗದಲ್ಲಿ ಸಾಧಿಸಬೇಕೆಂಬ ಕನಸು ಹೊತ್ತಿರುವವರು ಇಲ್ಲಿಗೆ ಸೇರಬಹುದಾಗಿದೆ. ಈ ಕೋರ್ಸ್ ಮೂರು ತಿಂಗಳ ಅವಧಿಯ ಕೋರ್ಸ್ ಆಗಿದ್ದು, 6900 ಫೀಸ್ ಜೊತೆಗೆ ಕೋರ್ಸ್ ಮುಗಿದ ಮೇಲೆ ಸರ್ಟಿಫಿಕೇಟ್ ನೀಡಲಾವಗುವುದು. ಅಲ್ಲದೇ ನಮ್ಮ ಅಕಾಡೆಮಿಯಲ್ಲಿ ತರಬೇತಿ ಪಡೆದ ಆಯ್ದ ಪ್ರತಿಭಾನ್ವಿತರಿಗೆ ನಮ್ಮ ಸಂಸ್ಥೆಯಾದ ಜೀ ಸಿನಿಮಾಸ್ ಬ್ಯಾನರ್​ನಲ್ಲಿ ಅವಕಾಶ ಕೊಡಲಾಗುವುದು ಎಂದರು.

ನಟನೆ, ನಿರ್ದೇಶನ ತರಬೇತಿ ನೀಡಲಿದೆ ಜೀ ಅಕಾಡೆಮಿ: ಎಸ್.ಗುರು ದೇಶಪಾಂಡೆ

ಸದ್ಯ ಅಕಾಡೆಮಿ ಮೂರು ತಿಂಗಳ ಕೋರ್ಸ್ ಆಗಿದ್ದು, ಮುಂದಿನ ದಿನಗಳಲ್ಲಿ ಆರು ತಿಂಗಳ ಕೋರ್ಸ್ ಆರಂಭಿಸಲು ಯೋಜನೆ ಮಾಡಿದ್ದೇವೆ. ಅಲ್ಲದೇ ನಾವು ಜೈನ್ ಯೂನಿವರ್ಸಿಟಿ ಅವರ ಜೊತೆ ಸೇರಿ ಡಿಪ್ಲೊಮೋ ಕೋರ್ಸ್ ಆರಂಭಿಸಲು ಈಗಾಗಲೇ ಮಾತುಕತೆ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಇದು ಕಾರ್ಯಗತವಾಗಲಿದ್ದು ನಮ್ಮ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆದವರಿಗೆ ಯೂನಿವರ್ಸಿಟಿಯ ಡಿಪ್ಲೊಮಾ ಸರ್ಟಿಫಿಕೇಟ್ ಸಿಗುವಂತೆ ನೋಡಿಕೊಳ್ಳಲಿದ್ದೇವೆಂದು ನಿರ್ದೇಶಕ ಗುರು ದೇಶಪಾಂಡೆ ಜೀ ‌ಅಕಾಡೆಮಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಅಲ್ಲದೆ, ಈ ಅಕಾಡೆಮಿಯಲ್ಲಿ ವಿದ್ಯಾರ್ಥಿಗಳಿಗೆ ನಿರ್ದೇಶನದ ಬಗ್ಗೆ, ಹಿರಿಯ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ, ದಯಾಳ್ ಪದ್ಮನಾಭನ್, ಸೂಜಿದಾರ ಖ್ಯಾತಿಯ ನಿರ್ದೇಶಕ ಮೌನೇಶ್ ಬಡಿಗೇರ್, ಭರ್ಜರಿ ಚೇತನ್ ಕುಮಾರ್ ತಿಳಿಸಿಕೊಡಲಿದ್ದಾರೆ. ಇದಲ್ಲದೇ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ನವೀನ್ ಕೃಷ್ಣ, ಸುರೇಶ್ ಅರಸ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ. ಇನ್ನು ಪ್ರತಿ ವರ್ಷ ನಮ್ಮ ಅಕಾಡೆಮಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತರೊಬ್ಬರಿಗೆ ಉಚಿತವಾಗಿ ತರಬೇತಿ ನೀಡುವ ಉದ್ದೇಶವಿದೆಯೆಂದು ಹೇಳಿದ್ರು.

ABOUT THE AUTHOR

...view details