ಬೆಂಗಳೂರು:ಕೊರೊನಾ ಸಂದರ್ಭದಲ್ಲಿ ಅನಾಥ ಹಾಗೂ ಕುಟುಂಬದವರು ಸ್ವೀಕರಿಸಲು ನಿರಾಕರಿಸಿದ ಮೃತ ಕೊರೊನಾ ಸೋಂಕಿತ ವ್ಯಕ್ತಿಗಳ ಅಂತ್ಯ ಸಂಸ್ಕಾರ ನೆರವೇರಿಸಿರುವ ಶಾಸಕ ಜಮೀರ್ ಅಹಮದ್ ಕಾರ್ಯವನ್ನು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೊರೊನಾ ಸೋಂಕಿನಿಂದ ಮೃತರಾದ 120ಕ್ಕೂ ಹೆಚ್ಚು ಮಂದಿಯ ಅಂತ್ಯಕ್ರಿಯೆಯನ್ನು ಅವರ ಧರ್ಮದ ಸಂಪ್ರದಾಯಕ್ಕೆ ಅನುಗುಣವಾಗಿ ನೆರವೇರಿಸಿರುವ ನಮ್ಮ ಪಕ್ಷದ ಶಾಸಕ ಜಮೀರ್ ಅಹಮದ್ ಖಾನ್ ಕಾರ್ಯ ಶ್ಲಾಘನೀಯ. ಮೃತರ ಅಂತ್ಯಕ್ರಿಯೆಯನ್ನು ಸರ್ಕಾರ ಮತ್ತು ಕುಟುಂಬಸ್ಥರೇ ನಿರ್ಲಕ್ಷಿಸುತ್ತಿರುವ ಸಂದರ್ಭದಲ್ಲಿ ಶಾಸಕರ ಪ್ರಯತ್ನ ಅನುಕರಣೀಯ ಎಂದಿದ್ದಾರೆ.
ಪಠ್ಯದಿಂದ ಕೈಬಿಟ್ಟದ್ದಕ್ಕೆ ಬೇಸರ
ಪೌರತ್ವ, ಜಾತ್ಯತೀತತೆ ಮತ್ತು ಫೆಡರಲಿಸಂ ಕುರಿತ ಅಧ್ಯಾಯಗಳನ್ನು 11ನೇ ತರಗತಿಯ ಪಠ್ಯಕ್ರಮದಿಂದ ಕೈಬಿಡಲಾಗಿದೆ. ಇದು ಬೇರೇನೋ ಸೂಚನೆಯನ್ನು ನೀಡುತ್ತಿದೆಯೇ? ಹೌದು, ಇದು ರಾಷ್ಟ್ರೀಯ ಬಿಜೆಪಿ ಈ ಒಂದು ತತ್ವಗಳನ್ನು ನಂಬುವುದಿಲ್ಲ ಮತ್ತು ಅದರ ಹಿಂದಿನ ನಡವಳಿಕೆಯನ್ನು ಮೌಲ್ಯೀಕರಿಸುತ್ತಿದೆ. ಈ ನಿರ್ಧಾರವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಕೇಂದ್ರದ ಹೆಚ್ಆರ್ಡಿ ಇಲಾಖೆ ಪೌರತ್ವ, ಜಾತ್ಯತೀತತೆ ಮತ್ತು ಫೆಡರಲಿಸಂ ಕುರಿತು ಅಧ್ಯಾಯಗಳನ್ನು ಕೈಬಿಟ್ಟಿರುವ ನಿರ್ಧಾರವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇದು ಭಾರತೀಯ ಪ್ರಜಾಪ್ರಭುತ್ವದ ಪ್ರಮುಖ ಸ್ತಂಭಗಳನ್ನು ಅರ್ಥಮಾಡಿಕೊಳ್ಳುವುದರಿಂದ ಒಂದು ಪೀಳಿಗೆಯ ವಿದ್ಯಾರ್ಥಿಗಳನ್ನು ವಂಚಿತಗೊಳಿಸುತ್ತದೆ ಎಂದು ಹೇಳಿದ್ದಾರೆ.