ಕರ್ನಾಟಕ

karnataka

ETV Bharat / state

ಇಮ್ರಾನ್ ಪಾಷಾ ರೋಡ್ ಶೋಗೆ ಜಮೀರ್ ಅಹಮದ್ ಖಂಡನೆ; ಕಾನೂನು ಕ್ರಮಕ್ಕೆ ಆಗ್ರಹ - ಇಮ್ರಾನ್ ಪಾಷಾ ರೋಡ್ ಶೋಗೆ ಜಮೀರ್ ಅಹಮದ್ ಖಂಡನೆ

ರಾಜ್ಯಕ್ಕೆ ರಾಜ್ಯವೇ ಕೊರೊನಾದಿಂದ ಕಂಗಾಲಾಗಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಜನರನ್ನು ಗುಂಪುಗೂಡಿಸಿ ಮೆರವಣಿಗೆ ಮಾಡುವುದು ಬೇಜವಾಬ್ದಾರಿಯ ನಡವಳಿಕೆ ಎಂದು ಶಾಸಕ ಜಮೀರ್ ಅಹಮದ್ ಅಸಮಧಾನ ವ್ಯಕ್ತಪಡಿಸಿದರು.

Zameer Ahmed
ಜಮೀರ್ ಅಹಮದ್ ಟ್ವೀಟ್

By

Published : Jun 7, 2020, 10:37 PM IST

ಬೆಂಗಳೂರು: ಕೊರೊನಾ ಮಹಾಮಾರಿಯಿಂದ ಮುಕ್ತರಾಗಿ ಮನೆಗೆ ಹಿಂತಿರುಗಿದ ಪಾದರಾಯನಪುರ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ಮೆರವಣಿಗೆ ನಡೆಸಿದ್ದಕ್ಕೆ ಶಾಸಕ ಜಮೀರ್ ಅಹಮದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಮೀರ್ ಅಹಮದ್ ಟ್ವೀಟ್

ಸ್ಥಳೀಯ ಶಾಸಕರೂ ಆಗಿರುವ ಜಮೀರ್ ಅಹಮದ್ ಟ್ವೀಟ್ ಮೂಲಕ ತಮ್ಮ ಬೇಸರ ಹೊರಹಾಕಿದ್ದು, ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಕೊರೊನಾದಿಂದ ಗುಣಮುಖರಾಗಿ ಬಂದಿದ್ದು ನನಗೂ ಸಂತೋಷವಾಗಿತ್ತು, ಆದರೆ ಈ ರೀತಿ ಯುದ್ಧ ಗೆದ್ದು ಬಂದವರಂತೆ ಮೆರವಣಿಗೆ ಮೂಲಕ ಬಂದಿದ್ದನ್ನು ನಾನು ಖಂಡಿಸುತ್ತೇನೆ. ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಮೀರ್ ಅಹಮದ್ ಟ್ವೀಟ್

ರಾಜ್ಯಕ್ಕೆ ರಾಜ್ಯವೇ ಕೊರೊನಾದಿಂದ ಕಂಗಾಲಾಗಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಜನರನ್ನು ಗುಂಪುಗೂಡಿಸಿ ಮೆರವಣಿಗೆ ಮಾಡುವುದು ಬೇಜವಾಬ್ದಾರಿಯ ನಡವಳಿಕೆಯಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ತಿಳಿಹೇಳಬೇಕಾದವರೇ ಈ ರೀತಿ ವರ್ತಿಸಿದರೆ ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ.

ಕೊರೊನಾ ಕಾಟದಿಂದ ಪಾದರಾಯನಪುರ ಜನತೆ ಕಂಗಾಲಾಗಿದ್ದ ಸಂದರ್ಭ ಇದೇ ಇಮ್ರಾನ್ ಪಾಷಾ ಜೊತೆ ಜಮೀರ್ ಅಹ್ಮದ್ ನಿರಂತರವಾಗಿ ಓಡಾಡಿಕೊಂಡು ಜನರಿಗೆ ಧೈರ್ಯ ತುಂಬಿದ್ದರು. ಆದರೆ ಇದೀಗ ಇಮ್ರಾನ್ ಪಾಷಾ ನಡೆದುಕೊಂಡ ರೀತಿಗೆ ಪ್ರತಿಯೊಬ್ಬ ರಾಜಕಾರಣಿಯೂ ಆಕ್ರೋಶ ಹೊರಹಾಕುತ್ತಿರುವ ಸಂದರ್ಭದಲ್ಲಿ ಜಮೀರ್ ಕೂಡ ಖಂಡನೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details