ಕರ್ನಾಟಕ

karnataka

ETV Bharat / state

ಸಿಎಂ ಭೇಟಿಯಾದ ಜಮೀರ್ ಅಹ್ಮದ್ ಖಾನ್​: ಮಹತ್ವದ ವಿಷಯಗಳ ಕುರಿತು ಚರ್ಚೆ - ಬಿಬಿಎಂಪಿ ಚುನಾವಣೆ ಘೋಷಣೆ

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್, ಬಸವರಾಜ ಬೊಮ್ಮಾಯಿ ಹಾಗೂ ಬಿ ಎಸ್​ ಯಡಿಯೂರಪ್ಪ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.

ಸಿಎಂ ಭೇಟಿಯಾದ ಜಮೀರ್ ಅಹ್ಮದ್ ಖಾನ್
ಸಿಎಂ ಭೇಟಿಯಾದ ಜಮೀರ್ ಅಹ್ಮದ್ ಖಾನ್

By

Published : Sep 14, 2022, 9:28 PM IST

ಬೆಂಗಳೂರು: ಚಾಮರಾಜಪೇಟೆ ಶಾಸಕರು ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚಿಸಿದರು. ವಿಧಾನಸಭೆ ಅಧಿವೇಶನಕ್ಕೆ ತೆರಳಿದ ವೇಳೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಅವರು, ಚಾಮರಾಜಪೇಟೆ ಕ್ಷೇತ್ರದ ಅಭಿವೃದ್ಧಿ ಮತ್ತು ಸಮಸ್ಯೆಗಳ ಕುರಿತು ಚರ್ಚಿಸಿ ಮನವಿ ಸಲ್ಲಿಸಿದರು.

ಹೆಚ್ಚಿದ ಕುತೂಹಲ:ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್- ಬೊಮ್ಮಾಯಿ- ಯಡಿಯೂರಪ್ಪ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಬಿಬಿಎಂಪಿ ಚುನಾವಣೆ ಘೋಷಣೆಗೆ ಕ್ಷಣಗಣನೆ ನಡೆದಿದ್ದು, ಇದರ ಜೊತೆಗೆ ಇನ್ನು ಕೆಲವೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೂ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಜಮೀರ್ ಅಹ್ಮದ್ ಬಿಜೆಪಿ ರಾಜ್ಯ ನಾಯಕರ ಜೊತೆ ಚರ್ಚಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅವರು, ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಚಟುವಟಿಕೆಯಿಂದಲೂ ಸಾಕಷ್ಟು ದೂರ ಉಳಿದಿದ್ದಾರೆ. ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದ ಜಮೀರ್ ಅಹಮದ್ ಪಕ್ಷದ ಜೊತೆ ಅಷ್ಟಾಗಿ ಸಂಪರ್ಕ ಹೊಂದಿಲ್ಲ.

ಜೆಡಿಎಸ್​ನಿಂದ ಆಗಲೇ ಹೊರ ಬಿದ್ದು ದೂರ ಸರಿದಿರುವ ಅವರು, ಕಾಂಗ್ರೆಸ್​ನಲ್ಲಿಯೂ ಮನಸ್ಸು ಕೆಡಿಸಿಕೊಂಡಿದ್ದು ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಹುಡುಕಾಟ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ಈ ಗೊಂದಲಗಳ ನಡುವೆ ಅವರು ಬಿಜೆಪಿ ಪ್ರಮುಖರ ಭೇಟಿಯಾಗಿ ಸಮಾಲೋಚಿಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ಮಾಜಿ ಶಾಸಕ ಅಝಂ ಪೀರ್ ಹಾಗೂ ಮೈಸೂರು ಡಿ-ಡಬ್ಲ್ಯೂಎಸಿ ಅಧ್ಯಕ್ಷ ಘಯಾಸ್ ಅಹ್ಮದ್ ಉಪಸ್ಥಿತರಿದ್ದರು.

ಓದಿ:ಯಾವುದೇ ತಾರತಮ್ಯ ಇಲ್ಲದೇ ಒತ್ತುವರಿ ತೆರವು ಮಾಡಲಿದ್ದೇವೆ: ಸಿಎಂ ಬೊಮ್ಮಾಯಿ ಭರವಸೆ

ABOUT THE AUTHOR

...view details