ಕರ್ನಾಟಕ

karnataka

ETV Bharat / state

ಜಮೀರ್​ಗೆ ಕಂಟಕವಾದ ಐಎಂಎ ವಂಚನೆ ಪ್ರಕರಣ: ಇಡಿಯಿಂದ ಮತ್ತೆ ಸಮನ್ಸ್​​ ಜಾರಿ - Zameer ahmed IMA news

ಜಮೀರ್ ಅಹಮದ್ ಐಎಂಎ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಜೊತೆ ಕೆಲ ವ್ಯವಹಾರದಲ್ಲಿ ಭಾಗಿಯಾದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು. ಹೀಗಾಗಿ ಈ ಪ್ರಕರಣದಲ್ಲಿ ಇಡಿ ಕೂಡ ಜಮೀರನ್ನ ವಿಚಾರಣೆಗೆ ಒಳಪಡಿಸಿತ್ತು. ಸದ್ಯ ಸಿಬಿಐ ಪ್ರಕರಣ ತನಿಖೆ ಕೈಗೆತ್ತಿಕೊಂಡಿದ್ದು ಜಮಿರ್​ಗೆ ವಿಚಾರಣೆಗೆ ಹಾಜರಾಗುವಂತೆ ಸದ್ಯ ಸಮನ್ಸ್ ನೀಡಲಾಗಿದೆ.

ಮಾಜಿ ಸಚಿವ ಜಮೀರ್ ಅಹ್ಮದ್

By

Published : Oct 1, 2019, 1:44 PM IST

ಬೆಂಗಳೂರು: ಐಎಂಎ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ‌ ಎನ್ನಲಾದ ಮಾಜಿ ಸಚಿವ ಜಮೀರ್ ಅಹ್ಮದ್​ಗೆ ಸಿಬಿಐ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿ ಮೂರು ದಿನದಲ್ಲಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.

ಕಳೆದ ಬುಧವಾರ ವಿಚಾರಣೆಗೆ ಹಾಜರಾಗಿ ಸಿಬಿಐ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿ ಜಮೀರ್ ಹೊರಟು ಹೋಗಿದ್ದರು. ಇದೀಗ ಸಿಬಿಐ ಅಧಿಕಾರಿಗಳು ಮತ್ತೆ ವಿಚಾರಣೆಗೆ ಹಾಜರಾಗಿ ಎಂದು ಸಮನ್ಸ್ ನೀಡಿದ್ದಾರೆ.

ಜಮೀರ್ ಅಹಮದ್ ಐಎಂಎ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಜೊತೆ ಕೆಲ ವ್ಯವಹಾರದಲ್ಲಿ ಭಾಗಿಯಾದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು. ಹೀಗಾಗಿ ಈ ಪ್ರಕರಣದಲ್ಲಿ ಇಡಿ ಕೂಡ ಜಮೀರನ್ನ ವಿಚಾರಣೆಗೆ ಒಳಪಡಿಸಿತ್ತು. ಸದ್ಯ ಸಿಬಿಐ ಪ್ರಕರಣ ತನಿಖೆ ಕೈಗೆತ್ತಿಕೊಂಡಿದ್ದು ಜಮೀರ್​ಗೆ ವಿಚಾರಣೆಗೆ ಹಾಜರಾಗುವಂತೆ ಸದ್ಯ ಸಮನ್ಸ್ ನೀಡಲಾಗಿದೆ.

ಜಮೀರ್ ಅಹ್ಮದ್ ಜೊತೆಗೆ ಹಿರಿಯ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಕೂಡ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಐಪಿಎಸ್ ಅಧಿಕಾರಿಗಳು ‌ಮನ್ಸೂರ್ ಖಾನ್​ಗೆ ಸಹಾಯ ಮಾಡಿರುವ ಆರೋಪ ತನಿಖೆ ವೇಳೆ ಬಯಲಾಗಿತ್ತು.

ABOUT THE AUTHOR

...view details