ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆ ಮೇಲಿನ ಎಸಿಬಿ ದಾಳಿ ಖಂಡಿಸಿ ಕೆಲ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ. ಮುಂಜಾನೆಯಿಂದ ಜಮೀರ್ ಮನೆ ಮುಂದೆ ಜಮಾಯಿಸಿದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪದೇ ಪದೆ ಜಮೀರ್ ಅವರನ್ನ ಸರ್ಕಾರ ಟಾರ್ಗೆಟ್ ಮಾಡ್ತಿದೆ. ಈ ಹಿಂದೆ ಇಡಿ ದಾಳಿ ನಡೆಸಿದ್ದು, ಸದ್ಯ ಎಸಿಬಿ ದಾಳಿ ನಡೆಸಿದೆ. ಇದರ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.
ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಜಮೀರ್ ಅಭಿಮಾನಿ - ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆ ಮೇಲಿನ ಎಸಿಬಿ ದಾಳಿ
ಪ್ರತಿಭಟನೆ ವೇಳೆ ಜಮೀರ್ ಅಭಿಮಾನಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಸೀನ್ ಕ್ರಿಯೇಟ್ ಮಾಡಿದ್ದಾನೆ.
ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಜಮೀರ್ ಅಭಿಮಾನಿ
ಪ್ರತಿಭಟನೆ ವೇಳೆ ಜಮೀರ್ ಅಭಿಮಾನಿ ಒಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಯೂ ನಡೆಯಿತು. ಕ್ಯಾನ್ನಲ್ಲಿ ತಂದ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಯತ್ನಕ್ಕೆ ಮುಂದಾದಾಗ ಆತನಿಂದ ಪೆಟ್ರೋಲ್ ಮತ್ತು ಬೆಂಕಿ ಪೊಟ್ಟಣ ಕಸಿದುಕೊಂಡ ಆತನನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಅಭಿಮಾನಿಯ ಟೀ ಅಂಗಡಿಯಲ್ಲಿ ಚಹಾ ಕುಡಿದ ಶಿವಣ್ಣ: 5 ವರ್ಷದ ಕನಸು - ನನಸು