ಬೆಂಗಳೂರು: ಜಮೀರ್ ಅಹ್ಮದ್, ರೋಷನ್ ಬೇಗ್ ಮಾತ್ರವಲ್ಲದೇ ಫ್ರೆಜರ್ ಟೌನಿನ ಎಂ.ಎಂ ಸ್ಟ್ರೀಟ್ ನಲ್ಲಿರುವ ಜಮೀರ್ ಆಪ್ತ ಮುಜಾಹೀದ್ ಮನೆಯ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಜಮೀರ್ ಆಪ್ತವಲಯದಲ್ಲಿ ಮುಜಾಹೀದ್ ಪ್ರಮುಖನಾಗಿದ್ದ. ಈ ಹಿಂದೆ ಶಿವಾಜಿನಗರದಿಂದ ಕಾರ್ಪೋರೇಟರ್ ಚುನಾವಣೆಯಲ್ಲಿ ಸ್ಪರ್ಧಿಸಿ ಈತ ಸೋತಿದ್ದ. ಮುಂಬರುವ ಕಾರ್ಪೊರೇಟರ್ ಚುನಾವಣೆಯಲ್ಲಿ ಫ್ರೆಜರ್ ಟೌನ್ ಅಭ್ಯರ್ಥಿ ಎಂದೇ ಮುಜಾಹಿದ್ ಬಿಂಬಿತನಾಗಿದ್ದ.