ಬೆಂಗಳೂರು: ಕೊರೊನಾ ಎರಡನೇ ಅಲೆಯ ಆರ್ಭಟಕ್ಕೆ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. ಅದೆಷ್ಟೋ ಜನ ಸೋಂಕಿತರಿಗೆ ಉಪಚರಿಸುವವರಿಲ್ಲದೇ ಒದ್ದಾಡುತ್ತಿದ್ದಾರೆ. ಮನೆಯಲ್ಲಿ ಒಂಟಿಯಾಗಿರುವ ಕೆಲವು ಜನ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಹೀಗೆ ಕೊರೊನಾ ದೃಢಪಟ್ಟು ಅಡುಗೆ ಮಾಡಿಕೊಳ್ಳಲು ಸಾಧ್ಯವಾಗದವರಿಗೆ ಯುವ ಬ್ರಿಗೇಡ್ ಸಹಾಯ ಹಸ್ತ ಚಾಚಿದೆ. ಈ ಬಗ್ಗೆ ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿಶೇಷ ವಿಡಿಯೋ ಮಾಡಿದ್ದಾರೆ.
ರಾಜಧಾನಿಯ ಜಯನಗರ, ಗಿರಿನಗರ, ಬಸವನಗುಡಿ, ಬನಶಂಕರಿ ಪ್ರದೇಶಗಳಲ್ಲಿ ಪ್ರತಿ ಮಧ್ಯಾಹ್ನ 250 ಜನರಿಗೆ ಊಟ ಒದಗಿಸಲಾಗುತ್ತಿದೆ. ಬಿಎನ್‌ಎಮ್‌ಐಟಿ ಮತ್ತು ಸ್ವಾಮಿ ವಿವೇಕಾನಂದ ಶೇಷ್ಠ ಭಾರತ ಸಹಯೋಗದಲ್ಲಿ ಈ ಕೆಲಸ ನೆಡೆಯುತ್ತಿದ್ದು, ಯುವ ಬ್ರಿಗೇಡ್ನ 16 ಕಾರ್ಯಕರ್ತರು ಬೈಕ್‌ಗಳಲ್ಲಿ ಮನೆ ಮನೆಗೆ ತೆರಳಿ ಊಟ ವಿತರಿಸುತ್ತಿದ್ದಾರೆ. ಹುಬ್ಬಳ್ಳಿ -ಧಾರವಾಡದಲ್ಲೂ ಈ ಸೇವೆ ಇತ್ತೀಚೆಗೆ ಆರಂಭಗೊಂಡಿದೆ.
ಇದನ್ನೂ ಓದಿ:ಮಂಡ್ಯದಲ್ಲಿ 1,110 ಜನರಿಗೆ ಕೋವಿಡ್ ಪಾಸಿಟಿವ್ : 11 ಮಂದಿ ಮಹಾಮಾರಿಗೆ ಬಲಿ