ಯಲಹಂಕ:ಬೆಂಗಳೂರಿನ ಯಲಹಂಕದ ಯುವತಿ ಯುಕ್ತಿರಾಜೇಂದ್ರ ಕೇರಳದ ತಿರುವನಂತಪುರದಲ್ಲಿ ನಡೆದ 65ನೇ ನ್ಯಾಷನಲ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಎರಡು ಚಿನ್ನದ ಪದಕ ಗೆದ್ದರು. ನವೆಂಬರ್ 11ರಂದು ದಕ್ಷಿಣ ಕೊರಿಯಾದಲ್ಲಿ ನಡೆದ ಏಷ್ಯನ್ ಯುವತಿಯರ 10 ಮೀಟರ್ ಏರ್ಗನ್ ಶೂಟಿಂಗ್ನಲ್ಲಿ, ಟೀಮ್ನಲ್ಲಿ ಗೋಲ್ಡ್ ಮತ್ತು ವೈಯಕ್ತಿಕವಾಗಿ ಚಿನ್ನ ಗೆದ್ದು ಭಾರತಕ್ಕೆ ಗೌರವ ತಂದಿದ್ದರು.
ನ್ಯಾಷನಲ್ ಶೂಟಿಂಗ್ ಚಾಂಪಿಯನ್‌ಶಿಪ್: ಬೆಂಗಳೂರಿನ ಯುವತಿಗೆ 2 ಚಿನ್ನದ ಪದಕ - Yuktirajendra of bengaluru
65ನೇ ನ್ಯಾಷನಲ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಬೆಂಗಳೂರಿನ ಯುಕ್ತಿರಾಜೇಂದ್ರ ಎರಡು ಚಿನ್ನದ ಪದಕ ಗೆದ್ದಿದ್ದಾರೆ. ಕರ್ನಾಟಕ ಟೀಮ್ ವಿಭಾಗದಲ್ಲಿ ಎರಡು ಬೆಳ್ಳಿ ಪದಕ ಸಾಧನೆ ತೋರಿದ್ದಾರೆ.
ಯುಕ್ತಿರಾಜೇಂದ್ರ ಎರಡು ಚಿನ್ನದ ಪದಕ
ವೈಯಕ್ತಿಕವಾಗಿ ಸೀನಿಯರ್ ಮತ್ತು ಜ್ಯೂನಿಯರ್ ವಿಭಾಗದಲ್ಲಿ ಚಿನ್ನ ಗೆದ್ದರೆ, ಕರ್ನಾಟಕ ಟೀಮ್ ವಿಭಾಗದಲ್ಲಿ ಎರಡು ಬೆಳ್ಳಿ ಪದಕ ಸಾಧನೆ ತೋರಿದ್ದಾರೆ. ನ.20ರಿಂದ ಡಿಸೆಂಬರ್ 9ರವರೆಗೆ ನಡೆದ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ದೇಶದ ಎಲ್ಲಾ ರಾಜ್ಯಗಳ ಕ್ರೀಡಾಪಟುಗಳು ಭಾಗವಹಿಸಿದ್ದರು.
ಇದನ್ನೂ ಓದಿ:ಸೆಮೀಸ್ನಲ್ಲಿ ಅರ್ಜೆಂಟೀನಾ-ಕ್ರೊವೇಷಿಯಾ, ಮೊರಾಕ್ಕೊ-ಫ್ರಾನ್ಸ್ ಫೈಟ್: ಯಾರಿಗೆ ಫೈನಲ್ ಟಿಕೆಟ್?