ಕರ್ನಾಟಕ

karnataka

ETV Bharat / state

ಕೇಂದ್ರ ಸರ್ಕಾರ ರೈತರನ್ನು ಅಪರಾಧಿಗಳ ಪಟ್ಟಿಗೆ ಸೇರಿಸುತ್ತಿದೆ: ವೈಎಸ್​​ವಿ ದತ್ತಾ - ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತಾ

ರೈತರನ್ನು ಅಪರಾಧ ಪಟ್ಟಿಯಲ್ಲಿ ಸೇರಿಸುವ ಯತ್ನ ಕೇಂದ್ರ ಸರ್ಕಾರ ಮಾಡುತ್ತಿದೆ. ಆ ಮೂಲಕ ರೈತರ ಹೋರಾಟ ದುರ್ಬಲಗೊಳಿಸುವ ಯತ್ನ ನಡೆಸುತ್ತಿದೆ. ಹಾಲಿವುಡ್ ಸೆಲೆಬ್ರಿಟಿಗಳ ಟ್ವೀಟ್ ತಪ್ಪು ಅಂತಿದ್ದಾರೆ ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರು. ಆದರೆ ಹಿಂದೆ ಇಂದಿರಾಗಾಂಧಿ ಅವರ ತುರ್ತು ಪರಿಸ್ಥಿತಿ ಹೇರಿಕೆಯನ್ನು ಜಗತ್ತಿನ ಜನತಾಂತ್ರಿಕ ದೇಶಗಳು ವಿರೋಧಿಸಿದ್ದವು ಎಂದು ವೈಎಸ್​ವಿ ದತ್ತ ಹೇಳಿದ್ದಾರೆ.

ysv-datta-talk-about-central-govrnment-issue
ವೈಎಸ್​​ವಿ ದತ್ತಾ

By

Published : Feb 6, 2021, 3:17 PM IST

ಬೆಂಗಳೂರು: ರೈತರಿಂದ ಹೆದ್ದಾರಿ‌ ತಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಶಾಸಕ, ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತಾ, ರೈತರ ಪ್ರತಿಭಟನೆಗೆ ನಮ್ಮ ಬೆಂಬಲ ಇದೆ ಎಂದು ಹೇಳಿದ್ದಾರೆ.

ವೈಎಸ್​​ವಿ ದತ್ತಾ

ಓದಿ: ಸಾವು-ಬದುಕಿನ ಹೋರಾಟದಲ್ಲಿದ್ದ ನಾಯಿಗೆ ಸಿಸೇರಿಯನ್ ಹೆರಿಗೆ ಮಾಡಿಸಿದ ವೈದ್ಯರು

ಜೆಡಿಎಸ್ ಕಚೇರಿಯಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸುತ್ತೇವೆ. ನಮ್ಮದು ರೈತರ ಪಕ್ಷ, ರೈತರಿಗೆ ಅನ್ಯಾಯ ಆದಾಗ ಸುಮ್ಮನೆ ಕೂರಲ್ಲ ಎಂದರು.

ರೈತರಿಗೆ ಕೇಂದ್ರದ ಸ್ಪಷ್ಟೀಕರಣಗಳು ತೃಪ್ತಿ ತರುತ್ತಿಲ್ಲ. ರೈತರನ್ನು ಅಪರಾಧ ಪಟ್ಟಿಯಲ್ಲಿ ಸೇರಿಸುವ ಯತ್ನ ಕೇಂದ್ರ ಸರ್ಕಾರ ಮಾಡುತ್ತಿದೆ. ಆ ಮೂಲಕ ರೈತರ ಹೋರಾಟ ದುರ್ಬಲಗೊಳಿಸುವ ಯತ್ನ ನಡೆಸುತ್ತಿದೆ. ಹಾಲಿವುಡ್ ಸೆಲೆಬ್ರಿಟಿಗಳ ಟ್ವೀಟ್ ತಪ್ಪು ಅಂತಿದ್ದಾರೆ ಬಿಜೆಪಿ ನಾಯಕರು. ಆದರೆ ಹಿಂದೆ ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ್ದನ್ನು ಜಗತ್ತಿನ ಜನತಾಂತ್ರಿಕ ದೇಶಗಳು ವಿರೋಧಿಸಿದ್ದವು.

ಆಗ ಇದ್ದ ಜನಸಂಘವೂ ಅದನ್ನು ಒಪ್ಪಿಕೊಂಡಿತ್ತು. ಆದರೆ ಈಗ ಹಾಲಿವುಡ್ ಸೆಲೆಬ್ರಿಟಿಗಳ ಟ್ವೀಟ್ ತಪ್ಪು ಅಂತಿದೆ ಬಿಜೆಪಿ. ವಿದೇಶಿ ಸೆಲೆಬ್ರಿಟಿಗಳು ಸರ್ಕಾರದ‌ ನೀತಿಯನ್ನಷ್ಟೇ ವಿರೋಧಿಸಿದ್ದಾರೆ ಹೊರತು, ಅವರು ದೇಶವನ್ನು ವಿರೋಧಿಸಿಲ್ಲ ಎಂದು ಹೇಳಿದರು.

ABOUT THE AUTHOR

...view details