ಬೆಂಗಳೂರು: ನಗರದ ಕೆ.ಆರ್ ಮಾರುಕಟ್ಟೆ ಮೇಲಿನ ಫ್ಲೈ ಓವರ್ನಲ್ಲಿ ಯುವಕರ ಗುಂಪೊಂದು ಡೆಡ್ಲಿ ವ್ಹೀಲಿಂಗ್ ಮಾಡುವ ಮೂಲಕ ಪುಂಡಾಟ ಮೆರೆದಿದೆ. ವ್ಹೀಲಿಂಗ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕರ ಗುಂಪೊಂದು ನಾಲ್ಕು ದ್ವಿಚಕ್ರ ವಾಹನಗಳಲ್ಲಿ ಹೊರಟಿದ್ದು, ಒಂದು ಬೈಕ್ನಲ್ಲಿ ಇದ್ದ ಯುವಕರು ಏಕಾಏಕಿ ವ್ಹೀಲಿಂಗ್ ಮಾಡಿದ್ದಾರೆ.
ಕೆ.ಆರ್ ಮಾರ್ಕೆಟ್ ಫ್ಲೈ ಓವರ್ ಮೇಲೆ ಪುಂಡರಿಂದ ಡೆಡ್ಲಿ ಬೈಕ್ ವ್ಹೀಲಿಂಗ್ - ವಿಡಿಯೋ ವೈರಲ್ - ಕೆ ಆರ್ ಮಾರ್ಕೆಟ್ ಫ್ಲೈ ಓವರ್ ಮೇಲೆ ಪುಂಡರಿಂದ ಡೆಡ್ಲಿ ವ್ಹೀಲಿಂಗ್
ನಗರದ ಕೆ.ಆರ್ ಮಾರುಕಟ್ಟೆ ಮೇಲಿನ ಫ್ಲೈ ಓವರ್ನಲ್ಲಿ ಯುವಕರ ಗುಂಪೊಂದು ಡೆಡ್ಲಿ ವ್ಹೀಲಿಂಗ್ ಮಾಡುವ ಮೂಲಕ ಪುಂಡಾಟ ಮೆರೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
![ಕೆ.ಆರ್ ಮಾರ್ಕೆಟ್ ಫ್ಲೈ ಓವರ್ ಮೇಲೆ ಪುಂಡರಿಂದ ಡೆಡ್ಲಿ ಬೈಕ್ ವ್ಹೀಲಿಂಗ್ - ವಿಡಿಯೋ ವೈರಲ್ ಡೆಡ್ಲಿ ವ್ಹೀಲಿಂಗ್](https://etvbharatimages.akamaized.net/etvbharat/prod-images/768-512-14918045-thumbnail-3x2-dmmd.jpg)
ಡೆಡ್ಲಿ ವ್ಹೀಲಿಂಗ್
ಈ ವೇಳೆ ಉಳಿದ ಮೂರು ಬೈಕ್ಗಳಲ್ಲಿ ಇದ್ದ ಯುವಕರು ಇದನ್ನ ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದಾರೆ. ಯುವಕರ ಗುಂಪು ಕೆ.ಆರ್. ಮಾರುಕಟ್ಟೆ ಫ್ಲೈ ಓವರ್ ಆರಂಭದಿಂದ ಸ್ಯಾಟ್ಲೈಟ್ ಬಸ್ ನಿಲ್ದಾಣದವರೆಗೂ ವ್ಹೀಲಿಂಗ್ ಮಾಡಿದ್ದಾರೆ. ಇವರ ಪುಂಡಾಟಕ್ಕೆ ಅಕ್ಕಪಕ್ಕದ ವಾಹನ ಸವಾರರು ಗಾಬರಿಯಾಗಿದ್ದಾರೆ.
ಫ್ಲೈ ಓವರ್ ಮೇಲೆ ಪುಂಡರಿಂದ ಡೆಡ್ಲಿ ವ್ಹೀಲಿಂಗ್
ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಸಾರ್ವಜನಿಕರು ಈ ಯುವಕರ ಪುಂಡಾಟದ ವಿಡಿಯೋವನ್ನು ಸೆರೆಹಿಡಿದು ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.