ಬೆಂಗಳೂರು: ಹುಡುಗಿ ವಿಚಾರಕ್ಕೆ ನಡುರಸ್ತೆಯಲ್ಲಿ ತಲ್ವಾರ್ ಹಿಡಿದು ಯುವಕರ ಗುಂಪು ಪುಂಡಾಟ ನಡೆಸಿದೆ. ಸೋಮವಾರ ರಾತ್ರಿ ನಗರದ ಕ್ವೀನ್ಸ್ ರಸ್ತೆಯ ಬಾಳೆಕುಂದ್ರಿ ಸರ್ಕಲ್ನಲ್ಲಿ ಈ ಘಟನೆ ನಡೆದಿದೆ. ಬೈಕ್ ಸವಾರನನ್ನು ಹಿಡಿದು ಥಳಿಸಿ, ಮೂವರು ಯುವಕರು ಎಸ್ಕೇಪ್ ಆಗಿದ್ದಾರೆ.
ಹುಡುಗಿ ಜೊತೆಯಲ್ಲಿದ್ದಾಗಲೇ ಯುವಕನಿಗೆ ಥಳಿಸಲಾಗಿದೆ. ಅಲ್ಲದೇ ಓರ್ವ ಯುವಕ ತಲ್ವಾರ್ನಿಂದ ಹಲ್ಲೆಗೆ ಮುಂದಾದಾಗ, ಜೊತೆಯಲ್ಲಿದ್ದ ಮತ್ತೊಬ್ಬ ಸ್ನೇಹಿತ ಅದನ್ನು ಕಸಿದು ಸಮಾಧಾನಪಡಿಸಿದ್ದಾನೆ. ರಾತ್ರಿ 10 ಗಂಟೆ ಸಮಯದಲ್ಲಿ ಘಟನೆ ನಡೆದಿದೆ ಎನ್ನಲಾಗ್ತಿದೆ.