ಕರ್ನಾಟಕ

karnataka

ETV Bharat / state

ಲಾಕ್‌ಡೌನ್ ಸಂದರ್ಭ ಕಟ್ಟಡದ ತಾರಸಿ ಮೇಲೆ ಈ ಯುವಕರು ಮಾಡ್ತಿರೋದೇನು? - ಡ್ರೋನ್ ಕ್ಯಾಮರಾ ಕಣ್ಗಾವಲು

ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯ ಮಾಧವ ನಗರದ ಮನೆಯ ತಾರಸಿ ಮೇಲೆ ಯುವಕರಿಬ್ಬರು ಹುಕ್ಕಾ ಸೇವನೆ ಮಾಡುತ್ತಿದ್ದ ದೃಶ್ಯ ಸೆರೆಯಾಗಿದೆ.

terrace

By

Published : May 8, 2020, 10:26 AM IST

ಬೆಂಗಳೂರು: ಸಾಮಾನ್ಯವಾಗಿ ಲಾಕ್‌ಡೌನ್ ಅವಧಿಯಲ್ಲಿ ಮಹಾನಗರಗಳ ಮನೆಗಳ ತಾರಸಿಗಳ ಮೇಲೆ ಜನರು ವಾಕಿಂಗ್ ಮಾಡುವುದನ್ನು ಕಂಡಿದ್ದೆವು. ಆದರೆ ಇಲ್ಲೊಂದು ಮನೆಯ ತಾರಸಿಯ ಮೇಲೆ ಸೆರೆಯಾದ ದೃಶ್ಯ ಅಚ್ಚರಿ ಮೂಡಿಸಿದೆ.

ರೇಸ್‌ಕೋರ್ಸ್ ರಸ್ತೆಯ ಮಾಧವ ನಗರದ ಮನೆಯ ತಾರಸಿಯ ಮೇಲೆ ಯುವಕರಿಬ್ಬರು ಹುಕ್ಕಾ ಸೇವನೆ ಮಾಡುತ್ತಾ ಕುಳಿತಿದ್ದುದು ಕಂಡುಬಂದಿದೆ.

ಹುಕ್ಕಾ ಸೇದುತ್ತಿರುವ ದೃಶ್ಯ

ಓರ್ವ ಯುವತಿ ಹಾಗೂ ಇಬ್ಬರು ಯುವಕರು ಹರಟೆ ಹೊಡೆಯುತ್ತಿರುವ ಸಂದರ್ಭ ಯುವಕರಿಬ್ಬರು ಒಬ್ಬರಾದ ಮೇಲೊಬ್ಬರಂತೆ ಹುಕ್ಕಾ ಸೇವಿಸಿ ಹೊಗೆ ಬಿಡುತ್ತಿದ್ದರು. ನಗರದ ವಾಣಿಜ್ಯ ಪ್ರದೇಶದ ವಸತಿ ಸಮುಚ್ಛಯಗಳಲ್ಲಿ ಇಂತಹ ಬೆಳವಣಿಗೆ ನಿರಂತರವಾಗಿ ನಡೆಯುತ್ತಿದೆಯೇ? ಎಂಬ ಪ್ರಶ್ನೆ ಮೂಡಿದೆ.

ನಗರದ ಕೆಲವೆಡೆ ಡ್ರೋನ್ ಕ್ಯಾಮರಾ ಬಳಸಿ ಪೊಲೀಸರು ಮನೆಗಳ ತಾರಸಿ ಮೇಲೆ ನಡೆಯುವ ಚಟುವಟಿಕೆಯನ್ನು ಸೆರೆ ಹಿಡಿಯುತ್ತಿದ್ದಾರೆ. ಆದರೆ ಈ ಭಾಗದಲ್ಲಿ ಅಂತಹ ಪ್ರಯತ್ನ ನಡೆದಿಲ್ಲ ಎನ್ನುವುದು ಗೊತ್ತಾಗುತ್ತಿದೆ.

ABOUT THE AUTHOR

...view details