ಕರ್ನಾಟಕ

karnataka

ETV Bharat / state

ಪೊದೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನವಿಲು ಮರಿಗಳ ರಕ್ಷಣೆ - ಕಾಡಿನಿಂದ ನಾಡಿಗೆ ಬಂದ ನವಿಲನ್ನು ರಕ್ಷಿಸಿ ಇಲಾಖೆಗೆ ಒಪ್ಪಿಸಿದ ಗಡಿ ಯುವಕರು

ಆನೇಕಲ್ ತಾಲೂಕಿನ ರಾಚಮಾನಹಳ್ಳಿಯಲ್ಲಿ ಪೊದೆಯೊಂದರಲ್ಲಿ ಸಿಲುಕಿದ ಎರಡು ನವಿಲು ಮರಿಗಳನ್ನು ಯುವಕರು ವನ್ಯಜೀವಿ ಸಂರಕ್ಷಣಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ನವಿಲನ್ನು ರಕ್ಷಿಸಿ ಇಲಾಖೆಗೆ ಒಪ್ಪಿಸಿದ ಗಡಿ ಯುವಕರು
Youth rescued the peacock at Anekallu

By

Published : Mar 4, 2020, 7:46 PM IST

Updated : Mar 4, 2020, 8:42 PM IST

ಆನೇಕಲ್:ಪೊದೆಯೊಂದರಲ್ಲಿ ಸಿಲುಕಿ ಒದ್ದಾಡುತ್ತಿದ್ದ ಎರಡು ನವಿಲು ಮರಿಗಳನ್ನು ರಕ್ಷಿಸಿದ ಯುವಕರು ವನ್ಯಜೀವಿ ಸಂರಕ್ಷಣಾಧಿಕಾರಿಗಳಿಗೆ ಒಪ್ಪಿಸಿರುವ ಘಟನೆ ತಾಲೂಕಿನ ರಾಚಮಾನಹಳ್ಳಿಯಲ್ಲಿ ನಡೆದಿದೆ.

ಪೊದೆಯಲ್ಲಿ ಸಿಲುಕಿದ್ದ ನವಿಲು ಮರಿಗಳ ರಕ್ಷಣೆ

ಆನೇಕಲ್ ತಾಲೂಕಿನ ರಾಚಮಾನಹಳ್ಳಿ ಬಳಿ ದಾರಿತಪ್ಪಿ ಬಂದ ನವಿಲು ಮರಿಗಳು ಪೊದೆಯೊಂದರಲ್ಲಿ ಸಿಲುಕಿದ್ದವು. ಇವುಗಳನ್ನು ಕಂಡ ಯುವಕರು ರಕ್ಷಿಸಿ, ಪಶುವೈದ್ಯರಿಂದ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬನ್ನೇರುಘಟ್ಟ ವನ್ಯಜೀವಿ ಸಂರಕ್ಷಣಾ ಕೇಂದ್ರಕ್ಕೆ ಒಪ್ಪಿಸಿದ್ದಾರೆ.

ಈ ರೀತಿಯ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಕೆಲ ದಿನಗಳ ಹಿಂದೆ ಕಾಡು ಪಾಪ, ದೊಡ್ಡ ಗೂಬೆ, ಗಿಳಿಗಳು, ಜಿಂಕೆಗಳನ್ನು ಯುವಕರು ರಕ್ಷಿಸಿದ್ದಾರೆ. ಇನ್ನು ಈ ರೀತಿಯ ವನ್ಯಜೀವಿಗಳು ಸಿಕ್ಕರೆ ಬನ್ನೇರುಘಟ್ಟ ಅರಣ್ಯ ಇಲಾಖೆ ಅಥವಾ ವನ್ಯಜೀವಿ ಸಂರಕ್ಷಣಾ ವಲಯದ ಅಧಿಕಾರಿಗಳಿಗೆ ಒಪ್ಪಿಸುವಂತೆ ಅರಿವು ಮೂಡಿಸಲಾಗುತ್ತಿದೆ.

Last Updated : Mar 4, 2020, 8:42 PM IST

ABOUT THE AUTHOR

...view details