ಬೆಂಗಳೂರು:ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಭ್ಯರ್ಥಿಗಳ ಪ್ರಚಾರ ಕಾರ್ಯವೂ ಭರದಿಂದ ಸಾಗುತ್ತಿದ್ದು, ಇಂದು ಬಿಜೆಪಿ ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ಶರತ್ ಬಚ್ಚೇಗೌಡ ವಾಯುವಿಹಾರಿಗಳ ಬಳಿ ತೆರಳಿ ಮತಯಾಚಿಸಿದರು.
ವಾಯುವಿಹಾರಿಗಳ ಬಳಿ ಮತಯಾಚಸಿದ ಶರತ್ ಬಚ್ಚೇಗೌಡ ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಬೆಳಗ್ಗೆ ವಾಯುವಿಹಾರಕ್ಕೆ, ಕ್ರೀಡಾಭ್ಯಾಸಕ್ಕೆ ಆಗಮಿಸಿದ್ದ ಜನರಲ್ಲಿ ಬಳಿ ತೆರಳಿ ಬಿಜೆಪಿ ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ಶರತ್ ಬಚ್ಚೇಗೌಡ ಮತ ಯಾಚಿಸಿದರು. ಮತಯಾಚನೆ ಬಳಿಕ ಮಾತನಾಡಿದ ಅವರು ರಾಷ್ಟ್ರವೂ ಸರ್ವತೋಮುಖ ಅಭಿವೃದ್ಧಿ ಹೊಂದಲು ಮತ್ತೆ ನರೇಂದ್ರ ಮೋದಿ ಪ್ರಧಾನಿ ಆಗುವ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 5 ವರ್ಷಗಳ ಅಧಿಕಾರವಧಿಯಲ್ಲಿ ಮೇಕ್ ಇನ್ ಇಂಡಿಯಾದಂತಹ ಯೋಜನೆಯಿಂದಾಗಿ ಸ್ವಾವಲಂಬಿಯಾಗಲು ಸಹಕಾರಿಯಾಗಿದೆ. ಭಯೋತ್ಪಾದನೆ ನಿಗ್ರಹಿಸುವಲ್ಲಿ ಕಠಿಣ ಕ್ರಮ ಕೈಗೊಂಡಿರುವ ಕಾರಣದಿಂದಾಗಿ ಜನರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ರಾಷ್ಟ್ರದಲ್ಲಿ ಯುವಕರಿಗೆ ಉಜ್ವಲ ಭವಿಷ್ಯ ಕಲ್ಪಿಸಿಕೊಡಲು ಬಿಜೆಪಿ ಬದ್ಧವಾಗಿದ್ದು, ಈ ಎಲ್ಲಾ ಕಾರಣಗಳಿಂದಾಗಿ ಮತದಾರರು ಬಿಜೆಪಿಗೆ ಮತ ನೀಡಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು .
ಈ ವೇಳೆ ಮುಖಂಡರಾದ ಬಿ.ವಿ.ಬೈರೇಗೌಡ, ಅರುಣ್‌ಕುಮಾರ್ , ಕೇಶವಮೂರ್ತಿ, ಆರ್ .ಮುನಿನಂಜಪ್ಪ ಆಂಜಿನಪ್ಪ ಸಾಥ್ ನೀಡಿದರು.