ಬೆಂಗಳೂರು: ಪ್ರೀತಿಸಿದ ಯುವತಿ ಕೈತಪ್ಪಿದ್ದಕ್ಕೆ ಕೋಪಗೊಂಡು ಯುವಕನೋರ್ವ ತನ್ನ ಗೆಳೆಯನನ್ನೇ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಬೈಯಪ್ಪನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಗೈದ ರಾಕೇಶ್ನನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸತೀಶ್ ಕೊಲೆಯಾದ ಯುವಕ.
ಯುವತಿಗಾಗಿ ಸ್ನೇಹಿತರ ಮಧ್ಯೆ ಜಗಳ: ಸ್ನೇಹಿತರಾಗಿದ್ದ ರಾಕೇಶ್ ಹಾಗೂ ಸತೀಶ್ ಫ್ಲವರ್ ಡೆಕೊರೇಶನ್ ಕೆಲಸ ಮಾಡಿಕೊಂಡಿದ್ದರು. ಒಂದೇ ಕಡೆ ಕೆಲಸ ಮಾಡುತಿದ್ದ ಇಬ್ಬರು ಒಂದೇ ಯುವತಿಯನ್ನು ಪ್ರೀತಿಸುತ್ತಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆಗಳಾಗಿದ್ದವು. ಆದರೆ ಅಂತಿಮವಾಗಿ ಯುವತಿ, ಸತೀಶ್‌ನನ್ನು ಪ್ರೀತಿಸಿ ಮದುವೆ ಕೂಡ ಆಗಿದ್ದಳು.