ಹೈದರಾಬಾದ್/ಬೆಂಗಳೂರು: ಅಫ್ಘಾನಿಸ್ಥಾನದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಹೈದರಾಬಾದ್ ಮೂಲದ ಇಂಜಿನಿಯರ್ ಒಬ್ಬರನ್ನು ಮಂಡ್ಯದ ವೈದ್ಯರ ನೆರವಿನಿಂದ ಭಾರತಕ್ಕೆ ಏರ್ ಆಂಬ್ಯುಲೆನ್ಸ್ ಮೂಲಕ ಕರೆತರಲಾಗಿದೆ.
ಅಫ್ಘಾನಿಸ್ಥಾನದಲ್ಲಿ ಅಪಘಾತಕ್ಕೀಡಾದ ಇಂಜಿನಿಯರ್ ಏರ್ ಆಂಬ್ಯುಲೆನ್ಸ್ ಮೂಲಕ ಸ್ವದೇಶಕ್ಕೆ ಶಿಫ್ಟ್ - ಅಫ್ಘಾನಿಸ್ಥಾನದಲ್ಲಿ ಅನಾರೋಗ್ಯಕ್ಕಿಡಾದ ಯುವಕ
ಅಫ್ಘಾನಿಸ್ಥಾನದಲ್ಲಿ ರಸ್ತೆ ಅಪಘಾತಕ್ಕೀಡಾಗಿದ್ದ ಭಾರತದ ಇಂಜಿನಿಯರ್ ಒಬ್ಬರನ್ನು ಮಂಡ್ಯದ ವೈದ್ಯರ ನೆರವಿನಿಂದ ಏರ್ ಆಂಬ್ಯುಲೆನ್ಸ್ ಮೂಲಕ ಸ್ವದೇಶಕ್ಕೆ ಕರೆತರಲಾಗಿದೆ.
ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಏರ್ ಆಂಬ್ಯುಲೆನ್ಸ್ ಮೂಲಕ ವಿದೇಶದಿಂದ ರೋಗಿಯನ್ನು ಸ್ವದೇಶಕ್ಕೆ ಕರೆತರಲಾಗಿದೆ. ಲಾಕ್ಡೌನ್ ನಡುವೆಯೂ ಇಂಜಿನಿಯರ್ ಅವರನ್ನು ಕರೆತಂದು ಹೈದರಾಬಾದ್ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಐ ಕಾಟ್ ಸಂಸ್ಥೆಯ ಏರ್ ಆಂಬ್ಯುಲೆನ್ಸ್ ಮೂಲಕ ಅಫ್ಘಾನಿಸ್ಥಾನದ ಬಾಗ್ರಾಂವ್ ಏರ್ಬೇಸ್ ನಿಂದ ಐ ಕಾಟ್ ಮುಖ್ಯಸ್ಥರಾದ ಡಾ. ಶಾಲಿನಿ ನಲ್ವಾಡ್ ಮತ್ತು ಡಾ. ರಾಹುಲ್ ಸಿಂಗ್ ಸರ್ದಾರ್ ನೇತೃತ್ವದಲ್ಲಿ ಹೈದರಾಬಾದ್ಗೆ ಸ್ಥಳಾಂತರಿಸಲಾಗಿದೆ.
ಸತತ ಆರು ದಿನಗಳ ಪರಿಶ್ರಮದಿಂದ, ಕೇಂದ್ರ ಗೃಹ ಇಲಾಖೆ, ಆರೋಗ್ಯ ಇಲಾಖೆ, ವಿದೇಶಾಂಗ ಇಲಾಖೆ ಸೇರಿ ಐಡು ಇಲಾಖೆಯೊಂದಿಗೆ ಸಂಪರ್ಕ ಸಾಧಿಸಲಾಗಿತ್ತು. ಒಬ್ಬ ಇಂಜಿನಿಯರ್ಗೆ ವೈದ್ಯರು ಸಹಾಯ ಹಸ್ತ ಚಾಚಿದ್ದಾರೆ. ಸದ್ಯ ಲಾಕ್ ಡೌನ್ ಇರುವುದರಿಂದ ಮುಂಜಾಗ್ರತಾ ಕ್ರಮ ಕೈಗೊಂಡು ರೋಗಿಯನ್ನು ಅಫ್ಘಾನಿಸ್ಥಾನದಿಂದ ಸ್ಥಳಾಂತರಿಸಲಾಗಿದೆ ಎಂದು ಐ ಕಾಟ್ ಮುಖ್ಯಸ್ಥರಾದ ಡಾ. ಶಾಲಿನಿ ನಲ್ವಾಡ್ ಮಾಹಿತಿ ನೀಡಿದ್ದಾರೆ.
TAGGED:
youth iling in Afghanistan