ಬೆಂಗಳೂರು: ಅನ್ಯ ಧರ್ಮದ ಮುಖಂಡರು ಇನ್ನೊಂದು ಧರ್ಮದ ಕುರಿತು ವಿರೋಧಿ ಹೇಳಿಕೆ ಹಿನ್ನೆಲೆ ಸಂಗೀತ ಬೆರೆಸಿ ಲಾಂಗ್, ಮಚ್ಚುಗಳನ್ನು ಹಿಡಿದು ನಡುರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಅಕ್ಟೋಬರ್ 9ರಂದು ಈದ್ ಮಿಲಾದ್ ಹಿನ್ನೆಲೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ನಗರದ ರಸ್ತೆಯಲ್ಲಿ ಹತ್ತಾರು ಯುವಕರು ಲಾಂಗ್, ಮಚ್ಚು ಹಿಡಿದು ನೃತ್ಯ ಮಾಡಿದ್ದು, ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ.