ಕರ್ನಾಟಕ

karnataka

ETV Bharat / state

ವಿದ್ಯುತ್ ದರ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ - Protest Against BJP Govt

ಕೇವಲ ಸಚಿವ ಸಂಪುಟ ವಿಸ್ತರಣೆಗೆ ಸೀಮಿತವಾಗಿರುವ ಸಿಎಂ ಬಿಎಸ್​ವೈ, ರಾಜ್ಯದ ಜನರ ಕಷ್ಟ ಆಲಿಸುತ್ತಿಲ್ಲ. ಉಪಚುನಾವಣೆಗಳಲ್ಲಿ ಹಣ ಸುರಿದು ತಮ್ಮ ಅಭ್ಯರ್ಥಿಗಳನ್ನು ಆರಿಸಿ ತಂದಿದ್ದಾರೆ. ಅಧಿಕಾರದ ಆಸೆಗಾಗಿ ದೆಹಲಿ ಸುತ್ತುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್​ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು.

Youth Congress Protests Against BJP Govt
ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

By

Published : Nov 21, 2020, 5:51 PM IST

ಬೆಂಗಳೂರು: ಬಿಜೆಪಿ ಸರ್ಕಾರದ ತೆರಿಗೆ ನೀತಿ ಖಂಡಿಸಿ ಯುವ ಕಾಂಗ್ರೆಸ್​ ಮುಖಂಡರು ಮಹಾತ್ಮ ಗಾಂಧಿ ಪ್ರತಿಮೆ ಬಳಿ ಇಂದು ಪ್ರತಿಭಟನೆ ನಡೆಸಿದರು.

ಬಿಜೆಪಿ ರಾಜ್ಯದ ಜನತೆಯ ಮೇಲೆ ತೆರಿಗೆ ಹೊರೆ ಹಾಕುವ ಮೂಲಕ ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಕೊರೊನಾದಿಂದ ದೇಶ ಹಾಗೂ ರಾಜ್ಯ ಬಳಲುತ್ತಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದ ಜನತೆಯ ಮೇಲೆ ಮನ ಬಂದಂತೆ ತೆರಿಗೆ ಹಾಕುವ ಮೂಲಕ ಹಣ ವಸೂಲಾತಿಗೆ ಇಳಿದಿದೆ. ಈ ವಸೂಲಾತಿಯಿಂದ ರಾಜ್ಯದ ಜನ ಸಂಕಷ್ಟ ಎದುರಿಸುವಂತಾಗಿದೆ. ಹಲವು ತೆರಿಗೆಗಳನ್ನು ಹಾಕುವ ಮೂಲಕ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕೈ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ದೇಶ - ರಾಜ್ಯದ ಅಭಿವೃದ್ಧಿ ಮರೆತು ಸಾಲವನ್ನು ಸಂಗ್ರಹಿಸುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಸಾಲ ತೀರಿಸಲು ಜನರ ಮೇಲೆ ನಿರಂತರವಾಗಿ ವಿದ್ಯುತ್ ದರ ಹಾಗೂ ನಗರ ನಿವಾಸಿಗಳ ಕಟ್ಟಡದ ಆಸ್ತಿಗಳಿಗೆ ಹೆಚ್ಚಿನ ತೆರಿಗೆ ವಿಧಿಸಲು ತಯಾರಿ ನಡೆಸಿದ್ದಾರೆ. ಈಗಾಗಲೇ ವಿದ್ಯುತ್ ಇಲಾಖೆ ಶೇ. 40ರಷ್ಟು ಪ್ರತಿ ಯೂನಿಟ್​ಗೆ ದರ ಏರಿಕೆ ಮಾಡಿದೆ. ಹೊಸದಾಗಿ ಬಿಬಿಎಂಪಿ ಘನತ್ಯಾಜ್ಯ ವಿಲೇವಾರಿಗೆ ತೆರಿಗೆ ವಿಧಿಸಲು ಮುಂದಾಗಿದೆ. ಬಿಜೆಪಿ ಸರ್ಕಾರದ ಈ ನಿರ್ಧಾರದಿಂದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ.

ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಕೇವಲ ಸಚಿವ ಸಂಪುಟ ವಿಸ್ತರಣೆಗೆ ಸೀಮಿತವಾಗಿರುವ ಸಿಎಂ ಬಿಎಸ್​ವೈ, ರಾಜ್ಯದ ಜನರ ಕಷ್ಟವನ್ನು ಆಲಿಸುತ್ತಿಲ್ಲ. ಉಪಚುನಾವಣೆಗಳಲ್ಲಿ ಕೋಟ್ಯಂತರ ಹಣ ಸುರಿದು ಅಭ್ಯರ್ಥಿಗಳನ್ನು ಆರಿಸಿ ತಂದಿದ್ದಾರೆ. ಅಧಿಕಾರದ ಆಸೆಗಾಗಿ ಈ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ದೆಹಲಿ ಸುತ್ತುತ್ತಿದ್ದಾರೆ. ಇವರಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ. ಈ ಜನ ವಿರೋಧಿ ಸರ್ಕಾರ ಕೂಡಲೇ ತೆರಿಗೆ ಹಾಗೂ ವಿದ್ಯುತ್ ದರ ಏರಿಕೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್.ಮನೋಹರ್, ಜಿ.ಜನಾರ್ದನ್, ಎ.ಆನಂದ್, ಎಲ್.ಜಯಸಿಂಹ, ಈ.ಶೇಖರ್, ಎಂ.ಎ.ಸಲೀಂ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

ABOUT THE AUTHOR

...view details