ಬೆಂಗಳೂರು:ಸಾಂಸ್ಕೃತಿಕ ನಗರಿ ಮೈಸೂರಿನ ಐತಿಹಾಸಿಕ ಹಬ್ಬ ದಸರಾವನ್ನು ವರ್ಣಿಸಲು ಪದಗಳೇ ಸಾಲದು. ಅದರಲ್ಲೂ ಯುವ ದಸರಾ ಎಂದ ಮೇಲೆ ಕೇಳಬೇಕಾಗಿಲ್ಲ. ಮಹಾರಾಜ ಕಾಲೇಜಿನ ಮುಂಭಾಗದಲ್ಲಿರುವ ವಿಶಾಲವಾದ ಮೈದಾನದಲ್ಲಿ ಯುವ ದಸರಾ ಆಚರಿಸಲು ಸಿದ್ಧತೆ ನಡೆಸಲಾಗಿದೆ.
ಯುವ ದಸರಾಗೆ ಮತ್ತಷ್ಟು ಮೆರಗು: ಮೈಸೂರಿಗೆ ನೆಚ್ಚಿನ ಕಿರುತೆರೆ ನಟ-ನಟಿಯರು - television actor - actresses
ಸಾಂಸ್ಕೃತಿಕ ನಗರಿ ಮೈಸೂರಿನ ಐತಿಹಾಸಿಕ ಹಬ್ಬ ದಸರಾ ವರ್ಣಿಸಲು ಪದಗಳೇ ಸಾಲದು. ಮೈಸೂರಿನಲ್ಲಿ ಜರುಗುತ್ತಿರುವ ಯುವ ದಸರಾಕ್ಕೆ ಮತ್ತಷ್ಟು ಮೆರುಗು ನೀಡಲು ತಾರೆಯರು ಬರುತ್ತಿದ್ದಾರೆ.ಇಂದು ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ಆರಂಭವಾಗಲಿದೆ.
ಇದೀಗ ಮೈಸೂರಿನಲ್ಲಿ ಜರುಗುತ್ತಿರುವ ಯುವ ದಸರಾಕ್ಕೆ ಮತ್ತಷ್ಟು ಮೆರುಗು ನೀಡಲು ತಾರೆಯರು ಬರುತ್ತಿದ್ದಾರೆ. ಎಲ್ಲರನ್ನು ರಂಜಿಸುತ್ತಿರುವ ಕಿರುತೆರೆ ಕಲಾವಿದರು ಯುವ ದಸರಾಕ್ಕೆ ಬರಲಿದ್ದಾರೆ.
ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಲಚ್ಚಿ ಆಲಿಯಾಸ್ ಚಿನ್ನು, ಇತ್ತೀಚೆಗೆ ನಡೆದ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಮನೆ ಮೆಚ್ಚಿದ ಸೊಸೆ ಅವಾರ್ಡ್ ಪಡೆದ ರಶ್ಮಿ ಪ್ರಭಾಕರ್, ಪುಟ್ಟ ಗೌರಿ ಮದುವೆ ಧಾರಾವಾಹಿಯ ಹಿಮಾಳ ಜೊತೆಗೆ ತಕಧಿಮಿತ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಡ್ಯಾನ್ಸ್ ಮೂಲಕ ಮನೆ ಮಾತಾಗಿರುವ ನಮ್ರತಾ ಗೌಡ, ಅನುಬಂಧ ಅವಾಡ್ಸ್ನಲ್ಲಿ ಜನ ಮೆಚ್ಚಿದ ಯೂತ್ ಐಕಾನ್ ಪ್ರಶಸ್ತಿ ಪಡೆದ ಸೀತಾವಲ್ಲಭ ಧಾರಾವಾಹಿಯ ಮೈಥಿಲಿ ಆಲಿಯಾಸ್ ಸುಪ್ರೀತಾ ಸತ್ಯನಾರಾಯಣ, ಮಿಥುನರಾಶಿ ಧಾರಾವಾಹಿಯಲ್ಲಿ ವಿಲನ್ ಪಾತ್ರ ಕವಿತಾಳಾಗಿ ಗಮನ ಸೆಳೆದ ಕೋಳಿ ರಮ್ಯಾ, ಮಂಗಳ ಗೌರಿ ಮದುವೆ ಧಾರಾವಾಹಿಯ ಸ್ನೇಹಾಳಾಗಿ ಮಿಂಚಿದ ಯಶಸ್ವಿ. ಕೆ. ಸ್ವಾಮಿ ಮಹಾರಾಜ ಕಾಲೇಜಿನ ಮೈದಾನಕ್ಕೆ ಬರಲಿದ್ದಾರೆ.ಇಂದು ಸಂಜೆ 6 ಗಂಟೆಗೆ ಆರಂಭವಾಗಲಿರುವ ಈ ಕಾರ್ಯಕ್ರಮವನ್ನು ನೋಡಿ ಕಣ್ತುಂಬಿಸಿಕೊಳ್ಳುವುದೇ ಒಂದು ಆನಂದ.