ಬೆಂಗಳೂರು:ಸದಾಶಿವ ನಗರ ಠಾಣಾ ವ್ಯಾಪ್ತಿಯಲ್ಲಿರುವ ಸ್ಯಾಂಕಿ ಕೆರೆಯಲ್ಲಿ ಶವ ಪತ್ತೆಯಾಗಿದೆ.
ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಯುವಕನ ಶವ ಪತ್ತೆ... - Youngman body found in Sankey Lake at Bangalore
ಶ್ರೀರಾಂಪುರದ ಗೌತಮ್ ನಗರದ ನಿವಾಸಿ ದಿಲೀಪ್ ಹರಿದಾಸ್ ಎಂಬುವವರ ಶವ ಸ್ಯಾಂಕಿ ಕೆರೆಯಲ್ಲಿ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸ್ಯಾಂಕಿ ಕೆರೆಯಲ್ಲಿ ಯುವಕನ ಶವ ಪತ್ತೆ...
ಶ್ರೀರಾಂಪುರದ ಗೌತಮ್ ನಗರದ ನಿವಾಸಿ ದಿಲೀಪ್ ಹರಿದಾಸ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ ಸ್ಯಾಂಕಿ ಕೆರೆಯಲ್ಲಿ ಶವ ತೇಲುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ನೀರಿನಲ್ಲಿದ್ದ ಶವವನ್ನು ಮೇಲಕ್ಕೆ ಎತ್ತಿದ್ದಾರೆ. ಶ್ರೀರಾಮಪುರದ ಗೌತಮ್ ನಗರದ ನಿವಾಸಿ 22 ವರ್ಷದ ದಿಲೀಪ್ ಎಂಬಾತ ಮೃತನಾಗಿದ್ದು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.