ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್‌ನಿಂದ ಕೋವಿಡ್ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬಂದಿದೆ. ಆದ್ರೆ ಕೊರೊನಾದಿಂದ ಆಗುತ್ತಿರುವ ಸಾವು ನೋವುಗಳು ಮಾತ್ರ ನಿಯಂತ್ರಣವಾಗಿಲ್ಲ. ಅದ್ರಲ್ಲೂ ಕೋವಿಡ್‌ನಿಂದ ಮೃತಪಟ್ಟವರೆಂದು ಕುಟುಂಬಸ್ತರೇ ಹತ್ರಕ್ಕೆ ಸುಳಿಯುತ್ತಿಲ್ಲ.
ಇದೇ ರೀತಿಯ ಮನಕಲುಕುವ ಘಟನೆಯೊಂದು ನಗದರಲ್ಲಿ ನಡೆದಿದೆ. ಕೋವಿಡ್ ಸಾವೆಂಬ ಕಾರಣಕ್ಕೆ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲವೆಂದು ಸತ್ತ ಪತಿಯ ಶವದ ಮುಂದೆ ಪತ್ನಿ ಕಣ್ಣೀರಿಟ್ಟಿದ್ದಾಳೆ. ಈ ಹಿಂದೆ ಕೊರೊನಾದಿಂದ ಬಳಲುತ್ತಿದ್ದ ಸವರಿ ಮುತ್ತು ಚಿಕಿತ್ಸೆ ಪಡೆಯಲು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸವರಿ ಮುತ್ತು ಸಾವನ್ನಪ್ಪಿದ್ದಾರೆ. ಪತಿ ಮೃತ ಪಟ್ಟಿರುವ ವಿಷಯ ತಿಳಿದ ಪತ್ನಿ ಆಸ್ಪತ್ರೆಗೆ ದೌಡಾಯಿಸಿದ್ದಾಳೆ. ಆದರೆ, ದುರಾದೃಷ್ಟವಷಾತ್ ಕೋವಿಡ್ ಸಾವೆಂದು ಯಾವ ಸಂಬಂಧಿಕರು ಕೂಡ ಈಕೆಯ ಸಹಾಯಕ್ಕೆ ಮುಂದಾಗಿಲ್ಲ.