ಬೆಂಗಳೂರು: ಇಂದು ರಾಜ್ಯ ವಿಧಾನಸಭೆಗೆ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು ಸಂಜೆ 6 ಗಂಟೆಯವರೆಗೂ ನಡೆಯಲಿದೆ. ಜನತಂತ್ರದ ಈ ಹಬ್ಬದಲ್ಲಿ ಕನ್ನಡದ ಜನತೆ ಉತ್ಸಾಹದಿಂದ ತಮ್ಮ ಕ್ಷೇತ್ರದ ಮತಗಟ್ಟೆಗೆ ತೆರಳಿ ವೋಟ್ ಹಾಕುತ್ತಿದ್ದಾರೆ. ಇದೀಗ ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿದ್ದ ಯುವತಿಯೊಬ್ಬರು ರಾಜ್ಯಕ್ಕೆ ಆಗಮಿಸಿ ಮತದಾನ ಮಾಡಿದ್ದಾರೆ.
ಅಮೆರಿಕದಿಂದ ಬಂದು ಮತ ಚಲಾಯಿಸಿ ಕರ್ತವ್ಯ ಪ್ರಜ್ಞೆ ಮೆರೆದ ಬೆಂಗಳೂರಿನ ಯುವತಿ - ಕರ್ನಾಟಕ ಕುರುಕ್ಷೇತ್ರ 2023
ಬಸವನಗುಡಿ ಕ್ಷೇತ್ರದ ಮೇಘನಾ ಅಮೆರಿಕದಿಂದ ಬಂದು ಮತ ಚಲಾಯಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಬೆಂಗಳೂರಿನ ಯುವತಿ
ಬಸವನಗುಡಿ ಕ್ಷೇತ್ರದ ಮೇಘನಾ ಅಮೆರಿಕದಲ್ಲಿ ಉದ್ಯೋಗಿಯಾಗಿದ್ದಾರೆ. ಇಂದಿನ ಮತದಾನಕ್ಕೆ ಅಮೆರಿಕದಿಂದ ಬಂದು ಮತ ಚಲಾಯಿಸಿದ್ದಾರೆ. ಇದು ಅವರ ಎರಡನೇ ಬಾರಿಯ ಮತದಾನವಾಗಿದೆ. ಮತದಾನ ಎಂಬುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ ಎಂಬುದನ್ನು ಮೇಘನಾ ಸಾಬೀತುಪಡಿಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನ ಸರಾಗವಾಗಿ ಸಾಗುತ್ತಿದ್ದು, 11 ಗಂಟೆವರೆಗೆ 20.99% ಮತದಾನವಾಗಿದೆ.
ಇದನ್ನೂ ಓದಿ:ರಾಮನಗರದಲ್ಲಿ ಕುಮಾರಸ್ವಾಮಿ ಕುಟುಂಬ ಸಮೇತ ಮತದಾನ; ಹಾಸನದ ದೇವಸ್ಥಾನದಲ್ಲಿ ಹೆಚ್ ಡಿ ರೇವಣ್ಣ ಪೂಜೆ ಸಲ್ಲಿಕೆ
Last Updated : May 10, 2023, 3:05 PM IST