ಕರ್ನಾಟಕ

karnataka

ETV Bharat / state

ಮಾಸ್ಕ್ ವಿಚಾರಕ್ಕೆ ಯುವತಿ ಮೇಲೆ ಹಲ್ಲೆ.. ಬೀದಿ ರಂಪ ಮಾಡಿ ಪೊಲೀಸರ ಅತಿಥಿಯಾದ ಯುವತಿ - Sadashivnagar Police station

ಸಿಲಿಕಾಕ್ ಸಿಟಿಯಲ್ಲಿ ಮಾಸ್ಕ್​ ಮೂಗಿನ ಕೆಳಗೆ ಜಾರಿದೆ ಎಂಬ ಕಾರಣದಿಂದ ಯುವತಿಯೊಬ್ಬಳು ಬೀದಿ ರಂಪ ಮಾಡಿ, ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿ ಪೊಲೀಸರ ಅತಿಥಿಯಾಗಿದ್ದಾಳೆ.

Police arrested young woma
ಬೀದಿ ರಂಪ ಮಾಡಿ ಪೊಲೀಸರ ಅಥಿಯಾದ ಯುವತಿ

By

Published : Jun 1, 2021, 10:58 AM IST

Updated : Jun 1, 2021, 11:13 AM IST

ಬೆಂಗಳೂರು : ಮಾಸ್ಕ್ ವಿಚಾರಕ್ಕೆ ಬೆಳ್ಳಂ ಬೆಳಗ್ಗೆ ಯುವತಿಯೊಬ್ಬಳು ಬೀದಿ ರಂಪ ಮಾಡಿ ಪೊಲೀಸರ ಅತಿಥಿಯಾದ ಘಟನೆ ನಗರದ ಬಿ.ಎನ್​ ರಸ್ತೆಯಲ್ಲಿ ನಡೆದಿದೆ.

ಮಾಸ್ಕ್​ ಮೂಗಿನ ಕೆಳಗೆ ಜಾರಿದೆ ಎಂಬ ಕಾರಣಕ್ಕೆ ಅದ್ವೈತ ಅರುಣ್ ಕುಮಾರ್ ಎಂಬ ಯುವತಿ ಮತ್ತೊಬ್ಬ ಯುವತಿಯ ಮೇಲೆ ಹಲ್ಲೆ ನಡೆಸಿದ್ದಳು. ಇದನ್ನು ಪ್ರಶ್ನಿಸಲು ಮುಂದಾದ ಸಾರ್ವಜನಿಕರ ಮೇಲೂ ಆಕ್ರೋಶ ವ್ಯಕ್ತಪಡಿಸಿದ್ದಾಳೆ ಎಂದು ಆರೋಪಿಸಲಾಗಿದೆ.

ಬೀದಿ ರಂಪ ಮಾಡಿ ಪೊಲೀಸರ ಅಥಿಯಾದ ಯುವತಿ

ಯುವತಿಯ ಹುಚ್ಚಾಟಕ್ಕೆ ಬೇಸತ್ತ ಸ್ಥಳೀಯರು ಕೂಡಲೇ ಸದಾಶಿವನಗರ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಹೊಯ್ಸಳ ವಾಹನದಲ್ಲಿ ಸ್ಥಳಕ್ಕೆ ಬಂದ ಪೋಲಿಸರು ಹಲ್ಲೆ ಮಾಡಿದ ಯುವತಿಯನ್ನು ಠಾಣೆಗೆ ಕರೆದೊಯ್ದರು.

ಹಲ್ಲೆಗೊಳಗಾದ ಯುವತಿಯನ್ನು ಎಂ.ಎಸ್​ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ.

ವೀಕ್ಷಿಸಿ : ನಟ ಮಂಡ್ಯ ರಮೇಶ್ ಕಚೇರಿಗೆ ನುಗ್ಗಿದ ‘ತೋಳದ ಹಾವಿನ ಮರಿ’

Last Updated : Jun 1, 2021, 11:13 AM IST

ABOUT THE AUTHOR

...view details