ಬೆಂಗಳೂರು:ಆಟವಾಡುವ ವಯಸ್ಸಿನಲ್ಲೇ ಮೂರು ಕವನ ಸಂಕಲನ ರಚಿಸಿ ಅತ್ಯಂತ ಕಿರಿಯ ಭಾರತೀಯ ಕವಯತ್ರಿ ಎಂಬ ಕೀರ್ತಿಗೆ ಪಾತ್ರವಾಗಿದ್ದ ವಿದ್ಯಾರ್ಥಿನಿ ಕುಮಾರಿ ಅಮನ ಜೆ.ಕುಮಾರ್. ಇವರೀಗ ಅಂತಾರಾಷ್ಟ್ರೀಯ ವಿಶ್ವ ದಾಖಲೆಯಲ್ಲಿ ಅತ್ಯಂತ ಕಿರಿಯ ಕವಿಯತ್ರಿ ಹಾಗೂ ವಂಡರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಅತ್ಯಂತ ಕಿರಿಯ ಲೇಖಕಿ ಎಂದು ಗುರುತಿಸಲ್ಪಟ್ಟು ಹೊಸ ಎರಡು ದಾಖಲೆ ಬರೆದಿದ್ದಾರೆ.
ಕೆಎಸ್ಆರ್‌ಟಿಸಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮತ್ತು ಮಂಡಳಿ ಕಾರ್ಯದರ್ಶಿ ಡಾ.ಲತಾ ಟಿ.ಎಸ್ ಮತ್ತು ಜೈವಂತ್ ಕುಮಾರ್ ದಂಪತಿಯ ಮಗಳಾದ ಅಮನ ಜೆ.ಕುಮಾರ್ ಹೊಸದಾಗಿ ಎರಡು ಅಂತಾರಾಷ್ಟ್ರೀಯ ದಾಖಲೆಗೆ ಸೇರ್ಪಡೆಯಾಗಿದ್ದಾರೆ. ಈ ಕಿರಿಯ ಲೇಖಕಿಯ ವಯಸ್ಸು 14 ವರ್ಷ, 6 ತಿಂಗಳು ಹಾಗೂ 6 ದಿನ. ಈ ಬಾಲಕಿ ಇದೀಗ ಮೂರು ಪುಸ್ತಕಗಳನ್ನು ಸತತ ಮೂರು ವರ್ಷಗಳಲ್ಲಿ ಎರಡು ವಿವಿಧ ಭಾಷೆಗಳಲ್ಲಿ ಬರೆದಿದ್ದಾರೆ. ಈ ಮೂಲಕ ಕಿರಿಯ ಲೇಖಕಿ ಎಂದು ಹೆಸರಾಗಿದ್ದಾರೆ.
ತನ್ನ ಪ್ರಶಸ್ತಿಯೊಂದಿಗೆ ವಿದ್ಯಾರ್ಥಿನಿ ಕುಮಾರಿ ಅಮನ ಜೆ.ಕುಮಾರ್ ಅಮನ ಪ್ರಸ್ತುತ ಬಿಷಪ್ ಕಾಟನ್ ಗರ್ಲ್ಸ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದು, ಈಗಾಗಲೇ ಐದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ದಾಖಲೆಗಳನ್ನು ತನ್ನ ಹೆಸರಿನಲ್ಲಿ ಹೊಂದಿದ್ದಾರೆ. ಆಂಗ್ಲ ಭಾಷೆಯಲ್ಲಿ ಎರಡು ಹಾಗೂ ಹಿಂದಿಯಲ್ಲಿ ಒಂದು ಪುಸ್ತಕ ಬರೆದಿದ್ದಾರೆ. ಇವರ ನಾಲ್ಕನೇ ಪುಸ್ತಕ ಆಂಗ್ಲ ಭಾಷೆಯಲ್ಲಿ ಪ್ರಕಟವಾಗಲು ಸಿದ್ದವಾಗುತ್ತಿದೆ. ಅಲ್ಲದೇ ಅಮನ ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ "ಮಾಸ್ಟರ್ ಪೀಸಸ್ ಆಫ್ ವರ್ಲ್ಡ್ ಲಿಟರೇಚರ್" ಎಂಬ ತನ್ನ ಚೊಚ್ಚಲ ಸಾಹಿತ್ಯ ಕೋರ್ಸ್ ಮುಗಿಸಿದ್ದು, ಪುಟ್ಟ ವಯಸ್ಸಿನಲ್ಲೇ ಉದಯೋನ್ಮುಖ ಲೇಖಕಿಯಾಗಿದ್ದಾರೆ.
ಕಳೆದ ಡಿಸೆಂಬರ್ 16 ರಾಜಭವನದಲ್ಲಿ ಅಮನ ಜೆ ಕುಮಾರ್ ಬರೆದ 3ನೇ ಹಾಗೂ ಪ್ರಥಮ ಹಿಂದಿ ಕವನ ಸಂಕಲನ "ಲಫ್ಜೋನ್ ಕಿ ಮೆಹ್ಫಿಲ್" ಅನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬಿಡುಗಡೆ ಮಾಡಿದ್ದರು. ಇವರು 6ನೇ ತರಗತಿಯಲ್ಲಿದ್ದಾಗ ಇಂಗ್ಲಿಷ್ ಕವನಗಳನ್ನು ಬರೆಯಲು ಪ್ರಾರಂಭಿಸಿದ್ದು, ಪ್ರಥಮ ಕವನ ಸಂಕಲನ (Echoes of Soulful Poems) 'ಎಕೋಸ್ ಆಫ್ ಸೋಲ್ಫುಲ್ ಕವನಗಳು' ಅನ್ನು ಅಂದಿನ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಡಿಸೆಂಬರ್ 2020 ರಲ್ಲಿ ಬಿಡುಗಡೆ ಮಾಡಿದ್ದರು.
ಎರಡನೇ ಕವನ ಸಂಕಲನ (World Amidst the Words) “ಪದಗಳ ನಡುವಿನ ಪ್ರಪಂಚ” ವನ್ನು ರಾಜ್ಯಪಾಲರು ಡಿಸೆಂಬರ್ 2021 ರಲ್ಲಿ ಬಿಡುಗಡೆಗೊಳಿಸಿದ್ದರು. ಮೂರು ಕೃತಿಗಳು ಈಗಾಗಲೇ Amazon, Flipkart, Kindle, Evincepub, Playstore ನಲ್ಲಿ ಲಭ್ಯವಿದ್ದು, ನಾಲ್ಕನೇ ಕೃತಿಯೂ ಬಿಡುಗಡೆಗೆ ರೆಡಿಯಾಗಿದೆ.
ಕು. ಅಮನ ಅವರ ಇನ್ನಿತರ ಸಾಧನೆಗಳು:ಭಾರತದ ಕಿರಿಯ ಕವಯಿತ್ರಿ–ಇಂಡಿಯಾ ಬುಕ್ ಆಪ್ ರೆಕಾಡ್ಸ್-2021 ಸೇರ್ಪಡೆ, ಗ್ರಾಂಡ್ ಮಾಸ್ಟರ್ – ಏಷ್ಯಾ ಬುಕ್ ಆಪ್ ರೆಕಾರ್ಡ್ಸ್-2021 ಕಿರಿಯ ವಯಸ್ಸಿನಲ್ಲಿ ಕವಿತೆಗಳನ್ನು ಬರೆದಿರುವುದು. ‘ಕೌಟಿಲ್ಯ ವರ್ಷದ ಕಿರಿಯ ಕವಿ ಪ್ರಶಸ್ತಿ – 2021 ಗೋವಾದ ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ‘ನೋಬಲ್ ಬುಕ್ ಆಪ್ ವಲ್ರ್ಡ್ ರೆಕಾರ್ಡ್ – 2021 “ಅತ್ಯಂತ ಸಮೃದ್ದ ಕವಿ” ಏಪ್ರಿಲ್‌ನಿಂದ 2020 ರಿಂದ ನವೆಂಬರ್ 2021 ರವರೆಗೆ, ವಿವಿಧ ಥೀಮ್ಗಳ ಅಡಿಯಲ್ಲಿ 337 ಕವಿತೆಗಳನ್ನು ಬರೆದಿರುವುದು. ‘ಕಿರಿಯ ಕವಯಿತ್ರಿ’- ವರ್ಲ್ಡ್ ರೆಕಾರ್ಡ್ ವಿಶ್ವವಿದ್ಯಾಲಯ ಪ್ರವೇಶ 2022. ಸತತ ವರ್ಷಗಳಲ್ಲಿ ಕವನ ಸಂಕಲನ ಪುಸ್ತಕಗಳನ್ನು ಪ್ರಕಟಿಸಿದ ಕಿರಿಯ ಕವಿಯಿತ್ರಿ – “ಗೋಲ್ಡನ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ಸ್” 2022 ನಲ್ಲಿ ದಾಖಲೆ. ಒಟ್ಟು ಇಲ್ಲಿಯವರೆಗೂ ಇಂಗ್ಲಿಷ್ ಮತ್ತು ಹಿಂದಿಯಲ್ಲಿ 400 ಕ್ಕೂ ಹೆಚ್ಚು ಕವನಗಳನ್ನು ಬರೆದಿದ್ದಾರೆ.
ಇದನ್ನೂ ಓದಿ:ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಐತಿಹಾಸಿಕ ಚಿನ್ನದ ಪದಕ ಗೆದ್ದ ನಿತು - ಸ್ವೀಟಿ ಬೂರಾ