ಬೆಂಗಳೂರು: ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡ್ತಿರುವ ಪೊಲೀಸರಿಗೆ ಕಿಲ್ಲರ್ ಕೊರೊನಾ ಕಾಡ್ತಿದ್ದು, ಲಾಕ್ಡೌನ್ ವೇಳೆ ಸಿಬ್ಬಂದಿಗಳ ಕೊರತೆ ನೀಗಿಸುವ ಸಲುವಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಿಲಿಕಾನ್ ಸಿಟಿ ಜನತೆಗೆ ಸಿವಿಲ್ ವಾರ್ಡನ್ಗಳಾಗಿ ಕೆಲಸ ಮಾಡಲು ಆಹ್ವಾನ ನೀಡಿದ್ದರು.
ಪೊಲೀಸರ ಜೊತೆ ಕೊರೊನಾ ವಾರಿಯರ್ಸ್ ಆಗಿ ಅಖಾಡಕ್ಕಿಳಿದ ಯುವಕರು ಕಮಿಷನರ್ ಅವರ ಮನವಿಗೆ ಪೂರಕವಾಗಿ ಸ್ಪಂದಿಸಿದ ಬೆಂಗಳೂರಿಗರು ಪೊಲೀಸರ ಜೊತೆ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡಲು ಕೈ ಜೋಡಿಸಿದ್ದಾರೆ. ಇನ್ನು ಕೊರೊನಾ ವಾರಿಯರ್ ಆಗಿ ಕೆಲಸ ಮಾಡುವುದು ರಿಸ್ಕ್ ಎಂದು ಗೊತ್ತಿದ್ದರೂ, ಸ್ವ ಇಚ್ಛೆಯಿಂದ ಕೆಲಸ ಮಾಡಲು ಬಂದಿರುವ ಯುವಕರು ಪೊಲೀಸರ ಜೊತೆ ಸೇರಿ ಕೆಲಸ ಮಾಡ್ತಿರುವ ಅನುಭವವನ್ನು ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ.
ಕೊರೊನಾದಂತ ಕಷ್ಟದ ಸಮಯದಲ್ಲಿ ಪೊಲೀಸರು ತಮ್ಮ ಜೀವ ಪಣಕ್ಕಿಟ್ಟು ಕೆಲಸ ಮಾಡ್ತಿದ್ದಾರೆ. ಸದ್ಯ ಲಾಕ್ಡೌನ್ ಇರುವುದರಿಂದ ನಮಗೂ ಏನೂ ಕೆಲಸ ಇಲ್ಲ. ಹಾಗಾಗಿ ಜವಾಬ್ದಾರಿಯುತ ಪ್ರಜೆಯಾಗಿ ಪೊಲೀಸರಿಗೆ ಸಹಾಯ ಮಾಡುವ ಉದ್ದೇಶದಿಂದ ನಾನು ಕೊರೊನಾ ವಾರಿಯರ್ ಆಗಿ ಕೆಲಸ ಮಾಡಲು ಬಂದೆ. ಇಂತಹ ಸಮಯದಲ್ಲಿ ಯುವಕರು ಪೊಲೀಸರಿಗೆ ಸಹಾಯ ಮಾಡಿದ್ರೆ ಅವರು ಬೇರೆ ಕೆಲಸಗಳತ್ತ ಗಮನ ಹರಿಸಲು ಸಹಾಯವಾಗುತ್ತೆ ಎಂದು ಖಾಸಗಿ ಶಾಲೆಯಲ್ಲಿ ಬಾಸ್ಕೆಟ್ ಬಾಲ್ ಕೋಚ್ ಆಗಿ ಕೆಲಸ ಮಾಡುವ ದೈಹಿಕ ಶಿಕ್ಷಕ ಹರ್ಷರ್ಧನ್ ಹೇಳಿದ್ರು.
ಅಲ್ಲದೆ ಸರ್ವಿಸ್ ಇಂಜಿನಿಯರ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ವಿಜಯ್ ಕುಮಾರ್, ಸರ್ಕಾರ ನಮಗಾಗಿ ಕೆಲಸ ಮಾಡ್ತಿದೆ. ನಾವು ಅವರ ಜೊತೆ ಕೈ ಜೋಡಿಸಿ ಕೆಲಸ ಮಾಡಬೇಕು. ಜನರಿಗಾಗಿ ಪೊಲೀಸರು ಕಷ್ಟಪಟ್ಟು ಕೆಲಸ ಮಾಡ್ತಿದ್ದು, ನಾವು ಅವರಿಗೆ ನೆರವಾಗುವ ನಿಟ್ಟಿನಲ್ಲಿ ಕೊರೊನಾ ಭಯ ಇದ್ರು ಮನೆಯವರನ್ನು ಒಪ್ಫಿಸಿ ಈ ಕೆಲಸ ಮಾಡಲು ಬಂದಿರುವುದಾಗಿ ತಿಳಿಸಿದ್ರು.
ಅದೇ ರೀತಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುವ ಸಂಜಯ್ ಕುಮಾರ್, ಪೊಲೀಸರ ಜೊತೆ ಸೇರಿ ಕೆಲಸ ಮಾಡ್ತಿರುವುದಕ್ಕೆ ತುಂಬಾ ಖುಷಿ ಆಗ್ತಿದೆ. ಈಗಾಗಲೇ ಕೆಲವು ಪೊಲೀಸರು ಕೊರೊನಾದಿಂದ ಬಳಲುತ್ತಿದ್ದಾರೆ. ಕಮಿಷನರ್ ಭಾಸ್ಕರ್ ರಾವ್ ಅವರ ಒಂದು ಮಾತಿಗೆ ನಾನು ಕೆಲಸ ಮಾಡಲು ಬಂದೆ. ಯುವಕರೇ ಸಹಾಯ ಮಾಡದ್ರಿದೆ ಇನ್ಯಾರು ಮಾಡ್ತಾರೆ. ತುಂಬಾ ಜನ ಮನೆಯಲ್ಲಿ ಕೆಲಸ ಇಲ್ಲದೆ ಕಾಲ ಕಳೆಯುತ್ತಾರೆ, ಅದರ ಬದಲು ದಿನ 6 ಗಂಟೆ ಕೆಲಸ ಮಾಡುವುದರಿಂದ ಏನೂ ಸಮಸ್ಯೆ ಆಗುವುದಿಲ್ಲ. ಅಲ್ಲದೆ ನಾನು ಈ ಕೆಲಸ ಮಾಡಲು ಬಂದಿರುವುದಕ್ಕೆ ನಮ್ಮ ಮನೆಯವರು ತುಂಬಾ ಸಂತೋಷ ವ್ಯಕ್ತಪಡಿಸಿದರು ಎಂದು ವಾರಿಯರ್ಸ್ ಆಗಿ ಕೆಲಸ ಮಾಡ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.