ಬೆಂಗಳೂರು: ರಾಷ್ಟ್ರಪಿತ, ಸರಳ-ಶಾಂತಿ, ಸತ್ಯ, ಅಹಿಂಸೆ ಹಾಗೂ ರಾಮ ರಾಜ್ಯದ ಕನಸು ಬಿತ್ತಿದ್ದ ಮಹಾತ್ಮ ಗಾಂಧಿಯವರ 151 ನೇ ಜಯಂತಿಯನ್ನು ದೇಶದೆಲ್ಲೆಡೆ ಆಚರಿಸಲಾಗುತ್ತಿದೆ. ಈಗಿನ ಕಾಲಮಾನದಲ್ಲಿ ಗಾಂಧಿ ತತ್ವಗಳನ್ನು ಯುವಕರು ಯಾವ ರೀತಿ ಪಾಲನೆ ಮಾಡುತ್ತಿದ್ದಾರೆ ಎಂಬುದು ಎಲ್ಲರನ್ನು ಕಾಡುವ ಪ್ರಶ್ನೆಯಾಗಿದೆ.
ಮಹಾತ್ಮನ ಕನಸು, ಪ್ರಸ್ತುತ ಭಾರತ: ಯುವ ಜನತೆ ಏನಂತಾರೆ? - Gandhiji
ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ. ಅಹಿಂಸೆಯೇ ಪರಮ ಧರ್ಮ ಎಂದು ಬದುಕಿದ್ದ ರಾಷ್ಟ್ರಪಿತನ ಬಗ್ಗೆ ಯುವ ಜನತೆ ತಮ್ಮ ಅಭಿಪ್ರಾಯಗಳನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಯುವ ಜನತೆ 'ಈಟಿವಿ ಭಾರತ'ದೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಸಮಾಜದಲ್ಲಿ ನಡೆಯುತ್ತಿರುವ ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳು ಗಾಂಧಿ ತತ್ವಗಳನ್ನು ಕೊಲ್ಲುತ್ತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅನೇಕ ವಿದ್ಯಾರ್ಥಿಗಳು ಪ್ರಸ್ತುತ ಘಟನೆಗಳನ್ನು ಅಚಲೋಕಿಸಿ ಗಾಂಧಿ ತತ್ವಗಳಿಗೆ ಕೊಡಲಿ ಪೆಟ್ಟು ಬೀಳುತ್ತಿದೆ ಎಂದಿದ್ದಾರೆ. ರಾಮರಾಜ್ಯ ಎಂದು ಕರೆಯಲ್ಪಡುವ ನಾಡಿನಲ್ಲೇ ಹೆಣ್ಣಿನ ಮೇಲೆ ಶೋಷಣೆ, ಅತ್ಯಾಚಾರಗಳು ನಡೆಯುತ್ತಿವೆ. ಹೀಗಾಗಿ ರಾಮರಾಜ್ಯ ಕೇವಲ ಬಾಯಲ್ಲಿ ಇದೆಯೇ ಹೊರತು ಕಣ್ಣಲ್ಲಿ ಕಾಣಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.