ಕರ್ನಾಟಕ

karnataka

ETV Bharat / state

ಗರ್ಲ್​ ಫ್ರೆಂಡ್ ಹಿಂದೆ ಬಿದ್ದವನಿಗೆ ಚಾಕು ಇರಿತ; ಬೆಂಗಳೂರಲ್ಲಿ ಇಬ್ಬರು ಆರೋಪಿಗಳ ಬಂಧನ - ಚಾಕುವಿನಿಂದ ಇರಿದು ಹಲ್ಲೆ

ಯುವತಿ ವಿಚಾರಕ್ಕೆ ಗಲಾಟೆ ನಡೆದು ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಚಾಕು ಇರಿತ ಇಬ್ಬರು ಆರೋಪಿಗಳ ಬಂಧನ
ಚಾಕು ಇರಿತ ಇಬ್ಬರು ಆರೋಪಿಗಳ ಬಂಧನ

By ETV Bharat Karnataka Team

Published : Dec 30, 2023, 4:33 PM IST

Updated : Dec 30, 2023, 8:26 PM IST

ಗರ್ಲ್​ ಫ್ರೆಂಡ್ ಹಿಂದೆ ಬಿದ್ದವನಿಗೆ ಚಾಕು ಇರಿತ: ಡಿಸಿಪಿ ಹೇಳಿಕೆ

ಬೆಂಗಳೂರು: ಯುವತಿಯೊಬ್ಬಳ ವಿಚಾರವಾಗಿ ಕಿತ್ತಾಡಿಕೊಂಡು ಯುವಕನಿಗೆ ಚಾಕು ಇರಿದಿದ್ದ ಇಬ್ಬರು ಆರೋಪಿಗಳನ್ನು ಚಂದ್ರಾಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಾರ್ತಿಕ್ ಎಂಬಾತನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದ ಆರೋಪದಡಿ ಧನುಷ್ ಹಾಗೂ ಶಾಬುದ್ದೀನ್ ಎಂಬುವರನ್ನು ಬಂಧಿಸಲಾಗಿದೆ.

ಆರೋಪಿಗಳ ಪೈಕಿ ಧನುಷ್ ಹಾಗೂ ಚಾಕು ಇರಿತಕ್ಕೊಳಗಾಗಿರುವ ಕಾರ್ತಿಕ್ ಒಂದೇ ಏರಿಯಾದವರು. ಧನುಷ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಅದೇ ಯುವತಿಗೆ ಕಾರ್ತಿಕ್ ಸಹ ಕರೆ ಮಾಡುವುದು, ಹಿಂಬಾಲಿಸುವುದನ್ನ ಮಾಡುತ್ತಿದ್ದ ಎನ್ನಲಾಗಿದೆ. ಕಾರ್ತಿಕ್ ಕಾಟದಿಂದ ಬೇಸತ್ತಿದ್ದ ಯುವತಿ, ಈ ವಿಚಾರವನ್ನು ಧನುಷ್ ಬಳಿ ಹೇಳಿದ್ದಳು. ಡಿಸೆಂಬರ್ 20ರಂದು ಸಂಜೆ ತನ್ನ ಸ್ನೇಹಿತ ಶಾಬುದ್ದೀನ್ ಜೊತೆಗಿದ್ದ ಧನುಷ್, ಕಾರ್ತಿಕ್​ಗೆ ಕರೆ ಮಾಡಿ ಮನೆಯಿಂದ ಹೊರ ಬರುವಂತೆ ಹೇಳಿದ್ದ. ಬಳಿಕ ಕಾರ್ತಿಕ್​ನನ್ನು ಮನೆಯಿಂದ 500 ಮೀಟರ್ ದೂರಕ್ಕೆ ಕರೆಸಿಕೊಂಡು ಹೋದ ಆರೋಪಿಗಳು, ನಾಯಂಡಹಳ್ಳಿ ಸಮೀಪ‌ ಆತನ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಗಾಯಗೊಂಡು ಅಸ್ವಸ್ಥನಾಗಿದ್ದ ಕಾರ್ತಿಕ್, ತಾನೇ ತನ್ನ ದ್ವಿಚಕ್ರ ವಾಹನದ ಮೂಲಕ ತೆರಳಿ ಹತ್ತಿರದ ಆಸ್ಪತ್ರೆಗೆ ದಾಖಲಾಗಿದ್ದ. ಬಳಿಕ ಕಾರ್ತಿಕ್​ನ ಹೇಳಿಕೆ ಪಡೆದುಕೊಂಡಿದ್ದ ಚಂದ್ರಾಲೇಔಟ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಧನುಷ್ ಹಾಗೂ ಶಾಬುದ್ದೀನ್ ಅನ್ನು ಬಂಧಿಸಿದ್ದಾರೆ.

ಪ್ರಕರಣದ ಬಗ್ಗೆ ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ಮಾಹಿತಿ ನೀಡಿದ್ದು, ಡಿ.​ 20ರಂದು ಚಂದ್ರಾಲೇಔಟ್​ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಾರ್ತಿಕ್​ ಮತ್ತು ಧನುಷ್​ ಇಬ್ಬರು ಒಂದೇ ಯುವತಿಯನ್ನು ಪ್ರೀತಿಸುತ್ತಿದ್ದರು. ಈ ವಿಚಾರದಲ್ಲಿ ಧನುಷ್​ ಮತ್ತು ಆತನ ಸ್ನೇಹಿತ ಶಾಬುದ್ದೀನ್​ ಕಾರ್ತಿಕ್​ನನ್ನು​ ಚಾಕುವಿನಿಂದ ಇರಿದು ಹಲ್ಲೆ ಮಾಡಿರುತ್ತಾರೆ. ಬಳಿಕ ಆತ ಆಸ್ಪತ್ರೆಗೆ ದಾಖಲಾಗಿದ್ದಾನೆ. ಸದ್ಯ ಕಾರ್ತಿಕ್​ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹುಡುಗಿ ವಿಚಾರದಲ್ಲಿ ಗಲಾಟೆ ನಡೆದಿರುವುದು ಕಂಡು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ಪ್ರಕರಣ-ಪ್ರೀತಿ ವಿಚಾರಕ್ಕೆ ಕೊಲೆ: ಪ್ರೀತಿ ವಿಚಾರಕ್ಕೆ ಇಬ್ಬರು ಸ್ನೇಹಿತರ ‌ನಡುವೆ ಗಲಾಟೆ ನಡೆದು ಓರ್ವನ ಕೊಲೆಯಲ್ಲಿ ಅಂತ್ಯವಾಗಿದ್ದ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಕೆಲ ದಿನಗಳ ಹಿಂದೆ ನಡೆದಿತ್ತು. ಅಸ್ಸೋಂ ಮೂಲದ ಗೌತಮ್​​ ತಟಿ ಕೊಲೆ ಆರೋಪಿ, ಸನು ಉರಂಗ್​ ಕೊಲೆಗೀಡಾದ ಯುವಕ. ಪ್ರೀತಿ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ನಡೆದು ಗೌತಮ್​​ ತಟಿ ಆತನ ಸ್ನೇಹಿತ ಸನು ಉರಂಗ್​ನ ಕುತ್ತಿಗೆ ಬಿಗಿದು ಹತ್ಯೆ ಮಾಡಿ ಬಳಿಕ ಕಟ್ಟಡದಿಂದ ತಳ್ಳಿ ಸಹಜ ಸಾವು ಎಂದು ಬಿಂಬಿಸಲು ಹೋಗಿದ್ದ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕೊಲೆ ಎಂದು ಪತ್ತೆ ಹಚ್ಚಿ ಆರೋಪಿ ಗೌತಮ್​ ತಟಿಯನ್ನು ಬಂಧಿಸಿದ್ದರು.

ಇದನ್ನೂ ಓದಿ:ಹಣ ಡಬಲ್ ಮಾಡುವ ಆಮಿಷವೊಡ್ಡಿ ವಂಚನೆ: ಖತರ್ನಾಕ್ ಗ್ಯಾಂಗ್ ಬಂಧನ

Last Updated : Dec 30, 2023, 8:26 PM IST

ABOUT THE AUTHOR

...view details