ಬೆಂಗಳೂರು : ಹೊಸ ವರ್ಷ ಅಂದ್ರೆ ಕುಡಿದು ತಿಂದು ಎಂಜಾಯ್ ಮಾಡೋದೆ ಕೆಲಸ ಎಂದುಕೊಂಡಿರುವ ಕೆಲವರು ಈ ದಿನ ಮಾಡಬಾರದ ಕೆಲಸ ಮಾಡಿ ಸುದ್ದಿ ಆಗುವುದುಂಟು. ಅದಕ್ಕೆ ಉದಾಹರಣೆಯೆಂಬಂತೆ ಮತ್ತಿನಲ್ಲಿ ಯುವಕನೊಬ್ಬ ಯುವತಿ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ.
ಕುಡಿದ ಮತ್ತಿನಲ್ಲಿ ಯುವತಿಯನ್ನು ಆತ ತಬ್ಬಿಕೊಳ್ಳಲು ಮುಂದಾಗಿದ್ದಾನೆ. ತಬ್ಬಿಕೊಳ್ಳಲು ಮುಂದಾಗುತ್ತಿದ್ದಂತೆ ಯುವತಿ ಜೋರಾಗಿ ಕಿರುಚಾಡಿ ಕಪಾಳ ಮೋಕ್ಷ ಮಾಡಿದ್ದಾಳೆ.