ಆನೇಕಲ್ (ಬೆಂಗಳೂರು): ಯುವತಿಯನ್ನು ಕೊಂದು ಯುವಕ ನೇಣಿಗೆ ಶರಣಾಗಿರುವ ಸ್ಥಿತಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ.
ಆನೇಕಲ್ ತಾಲೂಕಿನ ಜಿಗಣಿ-ಬನ್ನೇರುಘಟ್ಟ ಮುಖ್ಯರಸ್ತೆಯ ನಿಸರ್ಗ ಬಡಾವಣೆಯ ಮನೆಯೊಂದರ ಮೊದಲ ಮಹಡಿಯಲ್ಲಿ ಯುವತಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದರೆ, ಯುವಕ ನೇಣಿಗೆ ಕೊರಳೊಡ್ಡಿರುವ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ.
ಆತ್ಮಹತ್ಯೆ ಮಾಡಿಕೊಂಡ ರೀತಿ ಯುವಕನ ಶವ ಪತ್ತೆ ಕೊಲೆಯಾದ ಯುವತಿ ಬನ್ನೇರುಘಟ್ಟ-ಬೆಂಗಳೂರು ರಸ್ತೆಯ ಕಾಲೇಜೊಂದರ ವಿದ್ಯಾರ್ಥಿನಿ ಎನ್ನಲಾಗಿದೆ. ನೇಣಿಗೆ ಶರಣಾದ ಯುವಕನ ಪರಿಚಯ ಇನ್ನೂ ನಿಗೂಢವಾಗಿದ್ದು ಜಿಗಣಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ಪ್ರಕರಣ ಭೇದಿಸಲು ವಿಶೇಷ ತಂಡಗಳನ್ನು ರಚಿಸುವ ಯೋಜನೆಯಲ್ಲಿದ್ದಾರೆ.
ಇದನ್ನೂ ಓದಿ:20 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಯುವತಿ ಆತ್ಮಹತ್ಯೆಗೆ ಶರಣು