ಕರ್ನಾಟಕ

karnataka

ETV Bharat / state

ಮದುವೆಯಾಗುವುದಾಗಿ ವಿಧವೆಗೆ ನಂಬಿಸಿ ಚಿನ್ನಾಭರಣ ದೋಚಿದ ಯುವಕ ಸೆರೆ - Grab the gold jewelry and escape

ಪ್ರದೀಪ ಎಂಬ ಯುವಕ ಮದುವೆಯ ಆಮಿಷವೊಡ್ಡಿ ತನ್ನ ಮನೆಯಲ್ಲಿದ್ದ ಚಿನ್ನಾಭರಣ ದೋಚಿರುವುದಾಗಿ ವಿಧವೆಯೊಬ್ಬರು ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸರಿಗೆ ದೂರು ನೀಡಿದ್ದರು.

A young man named Pradeepa
ಪ್ರದೀಪ ಎಂಬ ಯುವಕ

By

Published : Nov 30, 2022, 12:18 PM IST

ಬೆಂಗಳೂರು: ಮದುವೆಯಾಗುವುದಾಗಿ ವಿಧವೆಯನ್ನು ನಂಬಿಸಿ ಆಕೆ‌ಯ ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿರುವ ಆರೋಪದ ಮೇಲೆ ಯುವಕನನ್ನು ಮಾಗಡಿ ರಸ್ತೆ ಪೊಲೀಸರು ಸೆರೆ ಹಿಡಿದ್ದಾರೆ.‌ ಪ್ರದೀಪ ಬಂಧಿತ ಆರೋಪಿ.

ದೂರು ನೀಡಿದ ಮಹಿಳೆ ಬಸವೇಶ್ವರದಲ್ಲಿ ಮಗಳೊಂದಿಗೆ ವಾಸವಾಗಿದ್ದರು. ಕೆಲ ವರ್ಷಗಳ ಹಿಂದೆ ಗಂಡ ಮೃತಪಟ್ಟಿದ್ದಾರೆ. ಕಳೆದ ಕೆಲವು ತಿಂಗಳುಗಳ ಹಿಂದೆ ಪ್ರದೀಪನ ಪರಿಚಯವಾಗಿದೆ. ಕಾಲಕ್ರಮೇಣ ಈ ಪರಿಚಯ ಪ್ರೀತಿಗೆ ತಿರುಗಿದ್ದು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿದ್ದಾನೆ. ನನಗೆ ಮದುವೆಯಾಗಿಲ್ಲ, ನಿನ್ನನ್ನೇ ಪ್ರೀತಿಸುತ್ತೇನೆ ಎಂದು ಸುಳ್ಳು ಹೇಳಿದ್ದಾನೆ ಎನ್ನಲಾಗ್ತಿದೆ.

ಇದನ್ನೂ ಓದಿ:ಆಶ್ರಮದಲ್ಲಿ ಬಾಲಕಿಯರ ಸ್ನಾನ ಮಾಡುವ ವಿಡಿಯೋ ಚಿತ್ರೀಕರಿಸಿ ಬ್ಲಾಕ್​ಮೇಲ್ ಆರೋಪ

ಇದೇ ಸಲುಗೆಯಿಂದಲೇ ಆಗಾಗ ಮನೆಗೂ ಬಂದು ಹೋಗುತ್ತಿದ್ದನಂತೆ. ಇದೀಗ ಆರೋಪಿಯು ಮನೆಯಲ್ಲಿದ್ದ 15 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.

ABOUT THE AUTHOR

...view details