ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ) : ರಾಗಿ ಹೊಲದಲ್ಲಿ ಕಳೆನಾಶಕ ಸಿಂಪರಣೆ ಮಾಡುವಾಗ ಹೊಲದಲ್ಲಿ ಹಾದು ಹೋಗಿದ್ದ ವಿದ್ಯುತ್ ಲೈನ್ ಸ್ವರ್ಶಿಸಿ ಯುವಕ ಸಾವನ್ನಪ್ಪಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಹೊನ್ನಘಟ್ಟ ಗ್ರಾಮದ ಯುವಕ 34 ವರ್ಷದ ಜಗನ್ ಕುಮಾರ್ ಮೃತ ಯುವಕ.
ಕೊಡಿಗೆಹಳ್ಳಿ ಗ್ರಾಮದಲ್ಲಿ 20 ಗುಂಟೆ ಜಮೀನು ಖರೀದಿ ಮಾಡಿ, ಆ ಜಾಗದಲ್ಲಿ ರಾಗಿಯನ್ನು ಬೆಳೆದಿದ್ದರು. ರಾಗಿ ಬೆಳೆಯಲ್ಲಿ ವಿಪರೀತ ಕಳೆ ಬಂದಿದೆ ಎಂದು ಕಳೆ ನಾಶಕ ಸಿಂಪರಣೆ ಮಾಡಲು ರಾಗಿ ಹೋಲಕ್ಕೆ ಬಂದಿದ್ದಾರೆ. ಕಳೆ ನಾಶಕ ಸಿಂಪರಣೆ ಮಾಡುವಾಗ ಹೊಲದಲ್ಲಿ ಕೈಗೆಟುಕುವ ಎತ್ತರದಲ್ಲಿ 11 ಕೆ.ವಿ ವಿದ್ಯುತ್ ಲೈನ್ ಜಗನ್ ಕುಮಾರ್ಗೆ ತಗುಲಿದೆ. ವಿದ್ಯುತ್ ಸ್ವರ್ಶದಿಂದ ಜಗನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.