ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಡಿ ದೇವರಾಜ್ ಹೇಳಿಕೆ ಬೆಂಗಳೂರು/ಚಿಕ್ಕಮಗಳೂರು:ಯುವತಿಗೆ ಮೆಸೇಜ್ ಮಾಡಿರುವುದಕ್ಕೆ ಕೋಪಗೊಂಡು ಯುವಕನೊಬ್ಬನನ್ನು ಹತ್ಯೆ ಮಾಡಿ ಚಾರ್ಮಾಡಿ ಘಾಟ್ ಕಣಿವೆಯಲ್ಲಿ ಶವ ಎಸೆದು ಪರಾರಿಯಾಗಿದ್ದ ಯುವತಿಯ ಸೋದರ ಮಾವ ಸೇರಿ ನಾಲ್ವರು ಆರೋಪಿಗಳನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. 19 ವರ್ಷದ ಮತ್ತಿಕೆರೆ ನಿವಾಸಿ ಗೋವಿಂದರಾಜ್ ಎಂಬಾತನನ್ನು ಹತ್ಯೆಗೈದ ಆರೋಪದಡಿ ಅನಿಲ್ ಸಹಚರರಾದ ಕಿಶೋರ್, ಭರತ್ ಹಾಗೂ ಲೋಹಿತ್ ಎಂಬುವರನ್ನು ಬಂಧಿಸಲಾಗಿದ್ದು ತನಿಖೆ ಮುಂದುವರಿದೆದೆ. ಗೋವಿಂದರಾಜ್ ಹಾಗೂ ಯುವತಿ ಪರಸ್ಪರ ಸಂಬಂಧಿಕರಾಗಿದ್ದು, ಹಲವು ದಿನಗಳಿಂದ ಪರಸ್ಪರ ಮೆಸೇಜ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಇತ್ತೀಚೆಗೆ ಯುವತಿಯ ಸೋದರಮಾವ ಅನಿಲ್ಗೆ ಈ ವಿಷಯ ಗೊತ್ತಾಗಿದೆ. ಗೋವಿಂದರಾಜ್ ಮನೆಗೆ ಮಾತನಾಡಬೇಕೆಂದು ಆಂಧ್ರಹಳ್ಳಿಯಲ್ಲಿರುವ ತೋಟದ ಮನೆಗೆ ಅನಿಲ್‌ನನ್ನು ಕರೆಸಿಕೊಂಡಿದ್ದ. ಬಳಿಕ ಬೈಕ್‌ನಲ್ಲಿ ನೇರವಾಗಿ ಬ್ಯಾಡರಹಳ್ಳಿ ಸಮೀಪದ ಅಂದ್ರಹಳ್ಳಿಗೆ ಕರೆದೊಯ್ದಿದ್ದಾರೆ. ಅಲ್ಲಿ ಸ್ನೇಹಿತರಾದ ಭರತ್, ಕಿಶೋರ್ ಹಾಗೂ ಲೋಹಿತ್ ಜೊತೆ ಸೇರಿಕೊಂಡು ಗೋವಿಂದರಾಜುಗೆ ಮೆಸೇಜ್ ಬಗ್ಗೆ ಪ್ರಶ್ನಿಸಿ ಮರದ ತುಂಡಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ.
ಕುಸಿದು ಬಿದ್ದು ಗೋವಿಂದರಾಜು ಸಾವನ್ನಪ್ಪಿದ್ದು, ಶವವನ್ನು ಕಾರಿನ ಹಿಂಬದಿ ಸೀಟ್ನಲ್ಲಿ ಯಾರಿಗೂ ಅನುಮಾನ ಬರದಂತೆ ಕೂರಿಸಿಕೊಂಡು ನೇರವಾಗಿ ಚಾರ್ಮಾಡಿ ಘಾಟ್‌ನಲ್ಲಿ ಬಿಸಾಡಿ ಬಂದಿದ್ದಾರೆ. ಅನಿಲ್ ತನ್ನ ತಾಯಿಯ ಬಳಿ ಗೋವಿಂದರಾಜನ ಹತ್ಯೆಯ ವಿಷಯ ತಿಳಿಸಿದ್ದ. ಅನಿಲ್ ತಾಯಿ 112 ಸಂಖ್ಯೆಗೆ ಕರೆ ಮಾಡಿ ಘಟನೆಯನ್ನು ತಿಳಿಸಿದ್ದಾಳೆ.
ಇದನ್ನೂ ಓದಿ:ಪ್ರಚೋದನಕಾರಿ ಭಾಷಣ: ಶರಣ್ ಪಂಪ್‌ವೆಲ್ ವಿರುದ್ಧ ತುಮಕೂರಿನಲ್ಲಿ ಪ್ರಕರಣ ದಾಖಲು
ಮಿಸ್ಸಿಂಗ್ ದೂರಿನ ಮೇಲೆ ತನಿಖೆ:112ಗೆ ಬಂದ ಕರೆ ಹಾಗೂ ಗೋವಿಂದರಾಜು ಪೋಷಕರು ನೀಡಿದ್ದ ಮಿಸ್ಸಿಂಗ್ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಯಶವಂತಪುರ ಪೊಲೀಸರು, ಕೃತ್ಯ ನಡೆದ 24 ಗಂಟೆಗಳಲ್ಲಿ ಗೋವಿಂದರಾಜು ಕಿಡ್ನಾಪ್ ಮಾಡಿ ಹತ್ಯೆಗೈದು ಶವ ಬಿಸಾಡಿದ್ದ ಅನಿಲ್ ಹಾಗೂ ಆತನ ಮೂವರು ಸ್ನೇಹಿತರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದಿರೋ ಪೊಲೀಸರು ಚಾರ್ಮಾಡಿಘಾಟ್‌ನಲ್ಲಿ ಬಿಸಾಡಿದ್ದ ಶವವನ್ನು ಹೊರ ತೆಗೆದಿದ್ದು, ತನಿಖೆ ಮುಂದುವರೆಸಿದ್ದಾರೆ.
'ಯಶವಂತಪುರ ಪೊಲೀಸ್ ಠಾಣೆಯಲ್ಲಿ ಸೋಮವಾರ ಗೋವಿಂದರಾಜ್ (19) ಎಂಬ ಹುಡುಗನ ಮಿಸ್ಸಿಂಗ್ ಪ್ರಕರಣ ದಾಖಲಾಗುತ್ತೆ. ಈ ಮಿಸ್ಸಿಂಗ್ ಪ್ರಕರಣವನ್ನು ಪತ್ತೆ ಹಚ್ಚುವ ಮೊದಲು ನಮ್ಮ 112 ಕಂಟ್ರೋಲ್ ರೂಮ್ಗೆ ಒಂದು ಕಾಲ್ ಬರುತ್ತೆ. ಒಂದು ಹುಡುಗನಿಗೆ ಹೊಡೆದು ತಪ್ಪು ಮಾಡಿದ್ದೇನೆ. ಈ ಹಿನ್ನೆಲೆ ಮಾಹಿತಿ ಕೊಡುತ್ತಿದ್ದೇವೆ ಎಂಬ ಮಾಹಿತಿ ಬಂದಿತ್ತು. 112 ಕಾಲ್ ಅನ್ನು ಟ್ರೆಸ್ ಮಾಡಿದಾಗ ಹಾಗೂ ಮಿಸ್ಸಿಂಗ್ ಲಿಂಕ್ ಪ್ರಕರಣವನ್ನು ಹುಡುಕುತ್ತಾ ಹೊರಟಾಗ ಗೋವಿಂದರಾಜ್ ಎಂಬ ಹುಡುಗ ಮತ್ತಿಕೆರೆ ನಿವಾಸಿಯಾಗಿರುತ್ತಾನೆ.
ಅವನನ್ನು ಅದೇ ಮತ್ತಿಕೆರೆ ನಿವಾಸಿ ಅನಿಲ್ ಕುಮಾರ್ ಎಂಬ ವ್ಯಕ್ತಿ ರಾತ್ರಿ ಮಾತನಾಡಬೇಕೆಂದು ಕರೆದು ಕಾರಿನಲ್ಲಿ ಕೂರಿಸಿಕೊಂಡು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ನನ್ನ ಅಕ್ಕನ ಮಗಳಿಗೆ ಮೆಸೇಜ್ ಮಾಡುತ್ತಿದ್ದಿಯಾ ಎಂದಿದ್ದಾನೆ. ಆಗ ಅವನು ಮೆಸೇಜ್ಗಳನ್ನು ತೋರಿಸುತ್ತಾನೆ. ನಂತರ ಅವನನ್ನು ಅಂದ್ರಹಳ್ಳಿಯ ಶೆಡ್ಗೆ ಕರೆದೊಯ್ದು ಅಲ್ಲಿ ಸ್ನೇಹಿತರನ್ನು ಕರೆಸಿಕೊಳ್ಳುತ್ತಾನೆ. ನಂತರ ಆ ಊರಿನ ಬೈಲಪ್ಪ ಎಂಬುವರ ಮಗ ಭರತ್ ಹಾಗೂ ಸ್ನೇಹಿತ ಕಿಶೋರ್ ಮತ್ತು ಲೋಹಿತ್ ಎಂಬುವವರು ಆತನನ್ನು ಒಂದು ಶೆಡ್ಗೆ ಕರೆದುಕೊಂಡು ಹೋಗಿ ಈ ಹುಡುಗಿ ಹೇಗೆ ಪರಿಚಯ? ಎಂದು ಪ್ರಶ್ನಿಸಿದ್ದಾರೆ.
ಆಗ ಅವನು ಹೇಳುತ್ತಾನೆ, ನಾನು ಲವ್ ಮಾಡುತ್ತಿದ್ದೇವೆ ಎಂದಿದ್ದಾನೆ. ಮತ್ತೆ ಅವನು ಆ ಹುಡುಗಿಗೆ ಕೆಲವೊಂದು ಅಶ್ಲೀಲ ಮೆಸೇಜ್ಗಳನ್ನು ಕಳುಹಿಸಿರುತ್ತಾನೆ. ಹೀಗಾಗಿ ಅವರು ಮರದ ಪೀಸ್ನಿಂದ ಅವನ ಕೈ ಕಾಲಿಗೆ ಹೊಡೆಯುತ್ತಾರೆ. ತದನಂತರ ಬೆನ್ನಿಗೆ ಹೊಡೆದಾಗ ಅವನು ಮಾರಾಣಾಂತಿಕವಾಗಿ ಕುಸಿದುಬೀಳುತ್ತಾನೆ. ಅನಂತರ ಸ್ವಲ್ಪ ಹೊತ್ತು ಬಿಟ್ಟು ನೋಡಿದಾಗ ಅವನು ಸತ್ತುಹೋಗಿರುತ್ತಾನೆ. ಆಗ ಇವರು ಕಾರ್ನಲ್ಲಿ ಅವನನ್ನು ಕೂರಿಸಿಕೊಂಡು ಚಾರ್ಮಾಡಿ ಘಾಟ್‌ನಲ್ಲಿ ಬಾಡಿಯನ್ನು ಡಿಸ್ಪೋಸ್ ಮಾಡಿರುತ್ತಾರೆ. ಅನಿಲ್ ನಂಬರ್ ಸ್ವಿಚ್ ಆಫ್ ಆಗಿರುತ್ತೆ. ಮತ್ತೆ ಅವನ ಸ್ನೇಹಿತರನ್ನು ವಿಚಾರಣೆ ನಡೆಸಿದಾಗ ಸಂಪೂರ್ಣ ಮಾಹಿತಿ ತಿಳಿದುಬಂದಿದೆ.
ಈಗ ಬಾಡಿಯನ್ನು ಪ್ರೋಸಿಜರ್ ಪ್ರಕಾರ ಮೂಡಿಗೆರೆ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಮ್ ಮಾಡಿದ್ದೇವೆ. ಈಗಾಗಲೇ ಆರೋಪಿಗಳ ವಿರುದ್ದ 302 ಹಾಗೂ 201 ಅಡಿ ಪ್ರಕರಣ ದಾಖಲಿಸಿ ವಶಕ್ಕೆ ಪಡೆದಿದ್ದೇವೆ' ಎಂದು ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಡಿ ದೇವರಾಜ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಯುವತಿಗೆ ಮೆಸ್ಸೇಜ್ ಮಾಡಿದ್ದೇ ಯುವಕನಿಗೆ ತಂತು ಆಪತ್ತು..! ಹುಡ್ಗಿ ಮಾವನಿಂದ ಯುವಕನ ಕಿಡ್ನಾಪ್, ಹತ್ಯೆ ಶಂಕೆ