ಬೆಂಗಳೂರು: ತಾನು ಏನೂ ಸಾಧನೆ ಮಾಡಿಲ್ಲ, ತನ್ನ ಬಗ್ಗೆ ಮನೆಯವರು ಏನೂ ಮಾತನಾಡುತ್ತಿಲ್ಲ ಎಂದು ಖಿನ್ನತೆಗೆ ಒಳಗಾಗಿ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜೀವನ್ ಅಂಬಾಟೆ ಆತ್ಮಹತ್ಯೆಗೆ ಶರಣಾದವರು. ಏನಾದರೂ ಸಾಧನೆ ಮಾಡಬೇಕೆಂಬ ತುಡಿತದೊಂದಿಗೆ ಬೀದರ್ನಿಂದ ಬೆಂಗಳೂರಿಗೆ ಬಂದಿದ್ದ ಜೀವನ್, ಪ್ರತಿಷ್ಠಿತ ಅಮೆಜಾನ್ ಕಂಪೆನಿಯಲ್ಲಿ ಟೀಂ ಲೀಡರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಇತ್ತೀಚಿನ ದಿನಗಳಲ್ಲಿ ತಾನು ಏನೂ ಸಾಧನೆ ಮಾಡುತ್ತಿಲ್ಲ ಎಂದು ಕೊರಗಿ ಖಿನ್ನತೆಗೆ ಒಳಗಾಗುತ್ತಿದ್ದ. ಮನೆಯವರು ತನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಗೊಣಗಾಡುತ್ತಿದ್ದ.
ಹೀಗಾಗಿ ತಾನು ಬದುಕಿರುವುದು ವೇಸ್ಟ್ ಎಂದು ನಿರ್ಧರಿಸಿದ್ದ.ಕೊನೆಗೆ ರೂಮ್ನ ಗೆಳೆಯರು ಊರಿಗೆ ಹೋಗಿದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಬಗ್ಗೆ ವಿಡಿಯೋಗಳನ್ನು ನೋಡಿ ಅದರಂತೆ ಪ್ರಯೋಗ ಮಾಡಿಕೊಂಡು ಈತ ಸಾವನ್ನಪ್ಪಿದ್ದಾನೆ. ಮೂರು ದಿನ ಮನೆಯಲ್ಲೇ ಶವವಿತ್ತು. ಸತ್ತ ನಂತರ ಯಾರಾದರೂ ರೂಂ ಒಳಗೆ ಬಂದರೆ ಅನಾಹುತವಾಗಬಹುದು ಎಂದು ಅರಿತು ಯಾವ ರೀತಿ ಮನೆ ಒಳಗೆ ಬರಬೇಕು ಎಂದು ಸಾಯುವ ಮುನ್ನ ಎಂದು ನಕ್ಷೆ ಮಾಡಿ ಮನೆ ಕಿಟಕಿ ಬಾಗಿಲಿಗೆ ಅಂಟಿಸಿದ್ದ. ನಕ್ಷೆಯಲ್ಲಿ ಡೋರ್ ತೆಗೆದ ಕೂಡಲೇ ಕಿಟಕಿ ಓಪನ್ ಮಾಡಿ. ಯಾರೂ ಲೈಟ್ಸ್ ಆನ್‌ಮಾಡಬೇಡಿ ಎಂದು ನಿರ್ದೇಶನ ನೀಡಿದ್ದ.
ಮೂರು ದಿನದ ನಂತರ ಬಂದಿದ್ದ ಸ್ನೇಹಿತರು ಜೀವನ್ ಮೃತರಾಗಿರುವುದು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಮಹದೇವಪುರ ಪೊಲೀಸರು ಧಾವಿಸಿದ್ದಾರೆ. ಮೊದಲು ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದರು. ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ ಜೀವನ್ ಬರೆದಿದ್ದ ಡೆತ್ ನೋಟ್ ಸಿಕ್ಕಿದೆ. ಸಾಧನೆ ಇಲ್ಲ ಮನೆಯವರು ಮಾತಾಡ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ನಿನ್ನೆ ಒಂದೇ ದಿನ 197 ಜನರು ಸಾವು, 43,846 ಹೊಸ ಕೇಸ್; 4.46 ಕೋಟಿ ಮಂದಿಗೆ ಲಸಿಕೆ