ಬೆಂಗಳೂರು:ಪ್ರೀತಿಸಲು ನಿರಾಕರಿಸಿದ ಯುವತಿ ಮೇಲೆ ಪಾಗಲ್ ಪ್ರೇಮಿ ಮನಸೋ ಇಚ್ಛೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಲಗ್ಗೆರೆ ನಿವಾಸಿಯಾಗಿರುವ ಯುವತಿಯ ತಾಯಿ ದೂರು ನೀಡಿದ ಮೇರೆಗೆ ಆರೋಪಿ ದೀಪಕ್ನನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. 21 ವರ್ಷದ ಯುವತಿ ನಗರದ ಖಾಸಗಿ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಆರೋಪಿ ದೀಪಕ್, ಯುವತಿಯನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ. ಆದರೆ ಯುವತಿ ಲವ್ ಮಾಡುವುದಿಲ್ಲ ಎಂದು ತಿರಸ್ಕರಿಸಿದ್ದು, ಕಳೆದ ವರ್ಷ ಆಗಸ್ಟ್ನಿಂದ ಲವ್ ಬ್ರೇಕ್ಅಪ್ ಆಗಿದೆ. ಬಳಿಕ ಯುವಕನ ಜೊತೆ ಸಂಪರ್ಕವನ್ನು ಯುವತಿ ಕಡಿತಗೊಳಿಸಿದ್ದಳು.