ಆನೇಕಲ್:ಮೊದಲ ಬಾರಿಗೆ ಭಾರತದಲ್ಲಿ ಯೋಗಾಸನ ವಿಶ್ವಕಪ್ ಸ್ಪರ್ಧೆಯನ್ನು ತಾಲೂಕಿನ ಜಿಗಣಿ ಎಸ್ ವ್ಯಾಸ ಯೋಗ ಅನುಸಂಧಾನ ಕೇಂದ್ರದಲ್ಲಿ ಏರ್ಪಡಿಸಲಾಗಿತ್ತು.
ಯೋಗಾಸನ ವಿಶ್ವಕಪ್ ಸ್ಪರ್ಧೆ 2022ಕ್ಕೆ 40 ದೇಶದ ವಿವಿಧ ಸ್ಪಾರ್ಧಾಳುಗಳು ಭಾಗಿಯಾಗಿದ್ದು, 150 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.
ಅಮೆರಿಕ, ನೇಪಾಳ,ಕೆನಡಾ, ಆಸ್ಟ್ರೇಲಿಯಾ, ಮೆಕ್ಸಿಕೋ, ಫ್ರಾನ್ಸ್, ಅರ್ಜೈಂಟೈನಾದಿಂದ ಬಂದಿರುವ ಸ್ಪಾರ್ಧಾಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎರಡು ದಿನದ ಕಾರ್ಯಕ್ರಮ ಉದ್ಘಾಟಿಸಲು ಸಿಎಂ ಬೊಮ್ಮಾಯಿ ಆಗಮಿಸಬೇಕಿತ್ತು ಕಾರಣಾಂತರದಿಂದ ಬರಲಾಗದ್ದರಿಂದ ಪ್ರಮುಖರಿಂದ ಚಾಲನೆ ದೊರೆಯಿತು.