ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ರಾಜಭವನದಲ್ಲಿ ರಾಜ್ಯಪಾಲ ವಜುಭಾಯ್ ವಾಲಾ ಯೋಗಾಭ್ಯಾಸ ಮಾಡಿದರು. ಇಡೀ ವಿಶ್ವವೇ ಇಂದು ಯೋಗ ದಿನ ಆಚರಿಸುತ್ತಿದ್ದು, ಆರನೇ ವರ್ಷದ ಯೋಗ ದಿನಾಚರಣೆಯಲ್ಲಿ ರಾಜ್ಯಪಾಲರು ಭಾಗಿಯಾದರು.
ರಾಜಭವನದಲ್ಲಿ ಯೋಗ ದಿನಾಚರಣೆ: ಯೋಗಾಭ್ಯಾಸ ಮಾಡಿದ ರಾಜ್ಯಪಾಲರು - Yoga Day in the Raja Mahabharata
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ರಾಜಭವನದಲ್ಲಿ ರಾಜ್ಯಪಾಲ ವಜುಭಾಯ್ ವಾಲಾ ಯೋಗಾಭ್ಯಾಸ ಮಾಡಿದರು.
ರಾಜ್ಯಪಾಲ ವಜುಭಾಯ್ ವಾಲಾ
ಕೊರೊನಾ ಹಿನ್ನೆಲೆಯಲ್ಲಿ ಸಾಮೂಹಿಕ ಯೋಗಾಚರಣೆಯನ್ನು ಸರ್ಕಾರ ಆಚರಿಸದೇ ಇದ್ದರೂ ವೈಯಕ್ತಿಕವಾಗಿ ಯೋಗಾಭ್ಯಾಸವನ್ನು ನಡೆಸಲಾಗುತ್ತಿದೆ. ಬಿಜೆಪಿ ಕಚೇರಿಯಲ್ಲಿ ಕೆಲವರಿಂದ ಮಾತ್ರ ಯೋಗ ನಡೆದರೆ ರಾಜಭವನದಲ್ಲಿ ರಾಜ್ಯಪಾಲ ವಜುಭಾಯ್ ವಾಲಾ ಒಬ್ಬರೇ ಯೋಗಾಭ್ಯಾಸ ಮಾಡಿದರು.