ಬೆಂಗಳೂರು: ಸದಾ ನೆಗೆಟಿವ್ ಸುದ್ದಿಯಲ್ಲಿರ್ತಿದ್ದ ನಗರದ ಸೆಂಟ್ರಲ್ ಜೈಲಿನಲ್ಲೀಗ ಪಾಸಿಟಿವ್ ವೈಬ್ಸ್ ಆರಂಭವಾಗಿದೆ. ಪರಪ್ಪನ ಅಗ್ರಹಾರದಲ್ಲಿ ಫಿಟ್ನೆಸ್ ಮಂತ್ರ ಜಪಿಸಲಾಗುತ್ತಿದ್ದು, ಕೋವಿಡ್ ಹಿನ್ನೆಲೆ ಜೈಲು ಸಿಬ್ಬಂದಿ ಸದೃಢವಾಗಬೇಕು ಹಾಗೂ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.
ಗಾಂಜಾ, ಚಾಕು, ಚೂರಿ ಹೊಡೆದಾಟ ಅಂತಿದ್ದ ಜೈಲಿನಲ್ಲೀಗ ಧ್ಯಾನ, ಯೋಗ ಅನ್ನೋ ಮಾತು ಕೇಳಿ ಬರುತ್ತಿವೆ. ಸಿಬ್ಬಂದಿಗೆ ಶ್ರೀ ರವಿಶಂಕರ್ ಗುರೂಜಿ ಆಶ್ರಮದಿಂದ ಯೋಗ ತರಬೇತಿ ನೀಡಲಾಗ್ತಿದೆ. ಸೂರ್ಯ ನಮಸ್ಕಾರ, ಯೋಗ, ಧ್ಯಾನ, ಗೂರೂಜಿ ಪುಸ್ತಕಗಳ ಬಗ್ಗೆ ಪ್ರವಚನ ನೀಡಲಾಗ್ತಿದೆ.
ಕೇವಲ ಯೋಗ ಅಷ್ಟೇ ಅಲ್ಲದೆ, ಕೈದಿಗಳ ಮನಪರಿವರ್ತನೆ ಮಾಡುವ ಬಗ್ಗೆ ತರಬೇತಿ ಕೂಡ ನೀಡಲಾಯಿತು. ಪರಪ್ಪನ ಅಗ್ರಹಾರದಲ್ಲಿ 6 ಸಾವಿರಕ್ಕೂ ಹೆಚ್ಚು ಕೈದಿಗಳಿಗಾಗಿ 600 ಜೈಲು ಸಿಬ್ಬಂದಿ ಇದ್ದಾರೆ. ಈ 600 ಮಂದಿಯನ್ನ ಹತ್ತು ಗುಂಪುಗಳಾಗಿ ವಿಂಗಡಣೆ ಮಾಡಿ, ಒಂದೊಂದು ಟೀಂನಲ್ಲಿ 60 ಮಹಿಳಾ ಹಾಗು ಪುರುಷ ಸಿಬ್ಬಂದಿಯನ್ನ ನೇಮಕ ಮಾಡಲಾಗಿದೆ. ಪ್ರತಿನಿತ್ಯ 6:30 ರಿಂದ 8:30ರವರೆಗೂ ಒಂದೊಂದು ದಿನ ಒಂದೊಂದು ಟೀಂಗೆ ಯೋಗ ತರಬೇತಿ ನೀಡಲಾಗುತ್ತೆ.