ಕರ್ನಾಟಕ

karnataka

ETV Bharat / state

ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ನಾಳೆಯಿಂದ ತಗ್ಗಲಿರುವ ಮಳೆ ಆರ್ಭಟ

ಕರಾವಳಿಯಲ್ಲಿ ಅ.15, 16 ರಂದು ವ್ಯಾಪಕ ಮಳೆಯಾಗುವ ನಿರೀಕ್ಷೆಯಿದ್ದು, ಕರಾವಳಿ ಜಿಲ್ಲೆಗಳಾದ ಉಡುಪಿ, ದ. ಕನ್ನಡ, ಉ. ಕನ್ನಡ ಜಿಲ್ಲೆಗಳಿಗೆ ಅ.15 ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ. ಅ.19 ರವರೆಗೆ ಕೆಲವು ಕಡೆ ಮಾತ್ರ ಮಳೆಯಾಗಬಹುದು. ಹಾಗೇ ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಮಳೆಯಾಗಲಿದೆ ಎಂದು ಸಿ. ಎಸ್ ಪಾಟೀಲ್ ತಿಳಿಸಿದರು.

Yellow alert for coastal districts tomorrow
ಕರಾವಳಿ ಜಿಲ್ಲೆಗಳಿಗೆ ನಾಳೆ ಯೆಲ್ಲೋ ಅಲರ್ಟ್: ನಾಳೆಯಿಂದ ತಗ್ಗಲಿರುವ ಮಳೆ ಆರ್ಭಟ

By

Published : Oct 15, 2020, 8:26 PM IST

ಬೆಂಗಳೂರು:ರಾಜ್ಯದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಿದ್ದು, ಮಾನ್ಸೂನ್ ಅತೀ ಚುರುಕಾಗಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ವಿಭಾಗದ ನಿರ್ದೇಶಕರಾದ ಸಿ. ಎಸ್. ಪಾಟೀಲ್ ತಿಳಿಸಿದ್ದಾರೆ.

ಕರಾವಳಿ ಜಿಲ್ಲೆಗಳಿಗೆ ನಾಳೆ ಯೆಲ್ಲೋ ಅಲರ್ಟ್: ನಾಳೆಯಿಂದ ತಗ್ಗಲಿರುವ ಮಳೆ ಆರ್ಭಟ

ಸದ್ಯ ಕೊಲ್ಲೂರಿನಲ್ಲಿ 22 ಸೆಂ. ಮೀ, ಹೊಸನಗರದಲ್ಲಿ 21 ಸೆಂಮೀ, ಕೊಟ್ಟಿಗೆಹಾರದಲ್ಲಿ 17 ಸೆಂ.ಮೀ ಮಳೆಯಾಗಿದೆ. ಮಧ್ಯ ಮಹಾರಾಷ್ಟ್ರ ಹಾಗೂ ಕೊಂಕಣದಲ್ಲಿ ವಾಯುಭಾರ ಕುಸಿತವಿದ್ದು, ಮುಂದೆ ಇದು ಪೂರ್ವ ಅರಬ್ಬೀ ಸಮುದ್ರವನ್ನು ತಲುಪಲಿದೆ. ಹಾಗೇ ವಾಯುಭಾರ ಕುಸಿತ ತೀವ್ರವಾಗುವ ಸಾಧ್ಯತೆ ಇದೆ.

ಕರಾವಳಿಯಲ್ಲಿ ಅ.15, 16 ರಂದು ವ್ಯಾಪಕ ಮಳೆಯಾಗುವ ನಿರೀಕ್ಷೆಯಿದ್ದು, ಕರಾವಳಿ ಜಿಲ್ಲೆಗಳಾದ ಉಡುಪಿ, ದ. ಕನ್ನಡ, ಉ. ಕನ್ನಡ ಜಿಲ್ಲೆಗಳಿಗೆ ಅ.15 ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ. ಅ.19 ರವರೆಗೆ ಕೆಲವು ಕಡೆ ಮಾತ್ರ ಮಳೆಯಾಗಬಹುದು. ಹಾಗೇ ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಮಳೆಯಾಗಲಿದೆ ಎಂದು ಸಿ. ಎಸ್ ಪಾಟೀಲ್ ತಿಳಿಸಿದರು.

ABOUT THE AUTHOR

...view details