ಯಲಹಂಕ: ಒಎಲ್ಎಕ್ಸ್ನಲ್ಲಿ ಜಾಹೀರಾತು ಕೊಡುವ ಬೈಕ್ ಮಾಲೀಕರನ್ನು ಫೋನ್ ಮಾಡಿ ಭೇಟಿಯಾಗಿ, ಬಳಿಕ ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಬೈಕ್ ಸಮೇತ ಪರಾರಿಯಾಗುತ್ತಿದ್ದ ಇಬ್ಬರನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಮಹಮ್ಮದ್ ನಸೀಫ್ ಎಂಬುವರು ಯಲಹಂಕದ ರೇವಾ ಸರ್ಕಲ್ ಬಳಿ ಬೈಕ್ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಿದ್ದರು. ಇವರಿಗೆ ಫೋನ್ಗೆ ಕರೆ ಮಾಡಿದ ಬೈಕ್ ಕಳ್ಳರು, ನವೆಂಬರ್ 13 ರ ರಾತ್ರಿ 9 ಗಂಟೆಗೆ ಬೈಕ್ ನೋಡಲು ಸ್ಥಳಕ್ಕೆ ಬಂದಿದ್ದಾರೆ. ಅನಂತರ ಟೆಸ್ಟ್ ಡ್ರೈವ್ ಮಾಡುವುದಾಗಿ ಹೇಳಿ, ಬೈಕ್‌ನೊಂದಿಗೆ ಪರಾರಿಯಾಗಿದ್ದರು. ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.