ಕರ್ನಾಟಕ

karnataka

ETV Bharat / state

ಸಿನಿಮೀಯ ಶೈಲಿಯಲ್ಲಿ ಇಂಜಿನಿಯರ್ ಅಪಹರಣ ಪ್ರಕರಣ: ಮೂರು ಗಂಟೆಯಲ್ಲೇ 6 ಮಂದಿ ಬಂಧನ

ಬೆಂಗಳೂರಿನ ಯಲಹಂಕದ ರೈತರ ಸಂತೆಯ ಬಳಿ ಇಂಜಿನಿಯರ್ ಒಬ್ಬರನ್ನು ಅಪಹರಿಸಿದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಯಲಹಂಕ ಪೊಲೀಸರು
ಯಲಹಂಕ ಪೊಲೀಸರು

By

Published : Feb 3, 2022, 10:52 AM IST

ಬೆಂಗಳೂರು: ಕೆಲಸ ಮಾಡಿಸಿಕೊಂಡು ಹಣ ಕೊಟ್ಟಿಲ್ಲವೆಂದು ಇಂಜಿನಿಯರ್​​ನನ್ನು ಅಪಹರಿಸಿದ್ದ ಆರು ಮಂದಿ‌ ಅಪಹರಣಕಾರರನ್ನು ಮೂರು ಗಂಟೆಯಲ್ಲೇ ಯಲಹಂಕ ಪೊಲೀಸರು ಹೆಡೆ ಮುರಿಕಟ್ಟಿದ್ದಾರೆ‌.

ಒಡಿಶಾ ಮೂಲದ ಸಿವಿಲ್ ಇಂಜಿನಿಯರ್ ಆಗಿದ್ದ ಮಾನಸ್ ಎಂಬಾತನನ್ನು ಕಿಡ್ನಾಪ್ ಮಾಡಿದ್ದ ಆರೋಪದಡಿ ನಂದ, ಸುನಿಲ್ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ‌. ಕಟ್ಟಡ ಕಾಂಟ್ರಾಕ್ಟರ್ ಹಾಗೂ ಸಿವಿಲ್ ಇಂಜಿನಿಯರ್ ಆಗಿದ್ದ ಮಾನಸ್​ಗೆ ಕಳೆದ ವರ್ಷ ಫೆಬ್ರವರಿಯಲ್ಲಿ ನಂದ ಮತ್ತು ಟೀಂ ಪರಿಚಯವಾಗಿತ್ತು. ಇವರು ಪರಸ್ಪರ ಮಾತನಾಡಿಕೊಂಡು ನಗರದಲ್ಲೆಡೆ ಕಟ್ಟಡ ನಿರ್ಮಾಣ ಕೆಲಸಗಳ ಗುತ್ತಿಗೆ ಪಡೆದು ಒಟ್ಟಿಗೆ ಕೆಲಸ ಮಾಡುತ್ತಿದ್ದರು‌.

ಅದೇ ರೀತಿ ಆರೋಪಿಗಳು ಕೆಲಸಕ್ಕಾಗಿ ಜೆಸಿಬಿ ಹಾಗೂ‌ ಇಟಾಚಿ ಬಾಡಿಗೆಗೆ ಪಡೆದಿದ್ದರು. ಇತ್ತೀಚೆಗೆ ಬಾಣಸವಾಡಿಯಲ್ಲಿ ಕೈಗೆತ್ತಿಕೊಂಡಿದ್ದ ಪ್ರಾಜೆಕ್ಟ್ ವಿಚಾರದಲ್ಲಿ ನಂದ ಹಾಗೂ ಮಾನಸ್ ನಡುವೆ ಹಣಕಾಸಿನ ವೈಮನಸ್ಸು ಉಂಟಾಗಿತ್ತು. ಕೆಲಸ ಮಾಡಿದ್ದಕ್ಕಾಗಿ 30 ಲಕ್ಷ ಹಣ ಕೇಳಲು ಹೋದ ಆರೋಪಿಗಳಿಗೆ ನೀವೂ ಸರಿಯಾಗಿ ಕೆಲಸ‌ ಮಾಡಿಲ್ಲ, ಅದೇ ಕೆಲಸವನ್ನ ಬೇರೆಯವರಿಂದ ಮಾಡಿಸಿದ್ದೇನೆ ಎಂದು ಹೇಳಿ ಮಾನಸ್ ಹಣ ಕೊಡಲು ನಿರಾಕರಿಸಿದ್ದಾನಂತೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಇದರಿಂದ ಅಕ್ರೋಶಗೊಂಡ ನಂದ ಹಾಗೂ ಆತನ ಸಹಚರರು ಮಾನಸ್ ಅಪಹರಣಕ್ಕೆ ಸ್ಕೆಚ್ ಹಾಕಿದ್ದಾರೆ‌. ನಿನ್ನೆ ಬೆಳಗ್ಗೆ ಯಲಹಂಕದ ರೈತರ ಸಂತೆ ಬಳಿ ಆರು ಮಂದಿ ಆರೋಪಿಗಳು ಮಾನಸ್​ನನ್ನ ಸ್ಕಾರ್ಪಿಯೋ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದಾರೆ.

ಅಪಹರಣ ವೇಳೆ ಮಾನಸ್​ ಜೊತೆಗಿದ್ದ ಯುವತಿ ಕೂಡಲೇ ಯಲಹಂಕ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ತಕ್ಷಣ ಕಾರ್ಯಪ್ರವೃತರಾದ ಇನ್ಸ್​ಪೆಕ್ಟರ್​ ಸತ್ಯನಾರಾಯಣ್ ಹಾಗೂ ಪಿಎಸ್ಐ ಶೈಲಜಾ ನೇತೃತ್ವದ ತಂಡ ಆರೋಪಿಗಳ ಮೊಬೈಲ್ ನೆಟ್​ವರ್ಕ್ ಟ್ರೇಸ್ ಮಾಡಿ, ಅಪಹರಿಸಿದ‌ ಮೂರು ಗಂಟೆಗಳಲ್ಲೇ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ರಾಜ್ಯಸಭಾ ಕಲಾಪ: ನೇರಪ್ರಸಾರ

ABOUT THE AUTHOR

...view details