ಕರ್ನಾಟಕ

karnataka

ETV Bharat / state

ಯಡಿಯೂರಪ್ಪ ನೇತೃತ್ವದಲ್ಲಿ ಋಣಮುಕ್ತ ಕಾಯ್ದೆ ಕುರಿತು ಸಭೆ: ಅಧಿಕಾರಿಗಳೊಂದಿಗೆ ಚರ್ಚೆ - debt relief act

ಖಾಸಗಿ ವ್ಯಕ್ತಿಗಳಿಂದ ಪಡೆದಿರುವ ಸಾಲ ಮನ್ನಾ ಕಾಯ್ದೆ ಹಾಗೂ ಈ ಕಾಯ್ದೆಯ ಸಾಧಕ ಬಾಧಕಗಳ ಬಗ್ಗೆ ಋಣಮುಕ್ತ ಕಾಯ್ದೆ ಕುರಿತು ನಡೆಯುತ್ತಿರುವ ಸಭೆಯಲ್ಲಿ ಚರ್ಚಿಸಲಾಗುತ್ತದೆ.

ಯಡಿಯೂರಪ್ಪ ನೇತೃತ್ವದಲ್ಲಿ ಋಣಮುಕ್ತ ಕಾಯ್ದೆ ಕುರಿತ ಸಭೆ ಆರಂಭವಾಗಿದೆ.

By

Published : Aug 1, 2019, 12:46 PM IST

ಬೆಂಗಳೂರು:ಋಣಮುಕ್ತ ಕಾಯ್ದೆ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಭೆ ನಡೆಸುತ್ತಿದ್ದಾರೆ.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಭೆ ಆರಂಭವಾಗಿದ್ದು, ಸಹಕಾರಿ ಇಲಾಖೆಯ ಅಧಿಕಾರಿಗಳ ಜೊತೆ ಸಿಎಂ ಚರ್ಚೆ ನಡೆಸುತ್ತಿದ್ದಾರೆ. ಖಾಸಗಿ ವ್ಯಕ್ತಿಗಳಿಂದ ಪಡೆದಿರುವ ಸಾಲ ಮನ್ನಾ ಕಾಯ್ದೆ ಹಾಗೂ ಈ ಕಾಯ್ದೆಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸುತ್ತಿದ್ದಾರೆ.

ಯಡಿಯೂರಪ್ಪ ನೇತೃತ್ವದಲ್ಲಿ ಋಣಮುಕ್ತ ಕಾಯ್ದೆ ಕುರಿತ ಸಭೆ ಆರಂಭವಾಗಿದೆ.

ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವಾಗ ಜಾರಿಯಾಗಿದ್ದ ಕಾಯ್ದೆಗೆ ರಾಷ್ಟ್ರಪತಿಗಳಿಂದ ಅಂಕಿತ ಸಿಕ್ಕಿರುವ ಹಿನ್ನೆಲೆಯಲ್ಲಿ ಋಣ ಮುಕ್ತ ಕಾಯ್ದೆ ಯಾವ ರೀತಿ ಜಾರಿಯಾಗಿದೆ. ಅದರ ಸಾಧಕ ಬಾಧಕಗಳು ಏನು ಎಂಬುದರ ಬಗ್ಗೆ ಚರ್ಚಿಸಲಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಬೆಳೆ‌ ಸಮೀಕ್ಷೆ ಕುರಿತು ಕೂಡ ಇಂದು ಸಭೆ ನಡೆಸಲಿದ್ದಾರೆ.

ಬೆಳೆ ಸಮೀಕ್ಷೆ ಕುರಿತು ‌ಕೃಷಿ ಇಲಾಖೆಯ ಅಧಿಕಾರಿಗಳ ಜೊತೆ ರಾಜ್ಯದಲ್ಲಿ ಬೆಳೆ ಸಮೀಕ್ಷೆ ಹೇಗೆ ಪ್ರಗತಿ ಆಗುತ್ತಿದೆ ಎಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ABOUT THE AUTHOR

...view details