ಬೆಂಗಳೂರು/ಲಂಡನ್: ರಾಜಕೀಯ ಜಂಜಾಟ, ಕೆಲಸದ ಒತ್ತಡದ ನಡುವೆಯೂ ಆಗಾಗ ಎಂಟಿಆರ್ ಮಸಾಲೆ ದೋಸೆ ಸವಿಯುವುದು ಎಂದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಎಲ್ಲಿಲ್ಲದ ಇಷ್ಟ. ವಿದೇಶ ಪ್ರವಾಸದಲ್ಲೂ ಎಂಟಿಆರ್ ರುಚಿ ಬಿಎಸ್ವೈ ಅವರನ್ನು ಬಿಟ್ಟಿಲ್ಲ, ಲಂಡನ್ನಲ್ಲಿರುವ ಎಂಟಿಆರ್ಗೆ ಭೇಟಿ ನೀಡಿ ಉಪಹಾರ ಸೇವಿಸಿದ್ದಾರೆ.
ಜೂನ್ 21ರಂದು ಕುಟುಂಬದೊಂದಿಗೆ ಲಂಡನ್ ಪ್ರವಾಸಕ್ಕೆ ತೆರಳಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ದಶಕಗಳ ನಂತರ ರಾಜಕೀಯ ಒತ್ತಡ ಬಿಟ್ಟು ಫುಲ್ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಸದ್ಯ ಲಂಡನ್ ಪ್ರವಾಸದಲ್ಲಿರುವ ಯಡಿಯೂರಪ್ಪ, ಅಲ್ಲಿ ವಾಸವಿರುವ ಕನ್ನಡಿಗರೊಂದಿಗೆ ಎಂಟಿಆರ್ ರೆಸ್ಟೋರೆಂಟ್ನಲ್ಲಿ ಉಪಹಾರ ಸವಿದರು. ಕೆಲಕಾಲ ಅನೌಪಚಾರಿಕ ಮಾತುಕತೆ ನಡೆಸಿದ ನಂತರ ಕನ್ನಡಿಗರೊಂದಿಗೆ ಫೋಟೋ ತೆಗೆಸಿಕೊಂಡರು.