ವರ್ಷಾಂತ್ಯದ ಸಂಭ್ರಮ: ಬನ್ನೇರುಘಟ್ಟ ಮೃಗಾಲಯಕ್ಕೆ ದಾಖಲೆಯ ಗಳಿಕೆ ಆನೇಕಲ್: ಸಾಮಾನ್ಯವಾಗಿ ಸರ್ಕಾರದಿಂದ ನಿರ್ವಹಿಸದ ಮೃಗಾಲಯ ಪ್ರಾಧಿಕಾರದಲ್ಲಿ ಪ್ರೇಕ್ಷಕರ ಗಳಿಕೆಯಿಂದಲೇ ನಡೆಯುವ ಜೀವ ಸಂಕುಲಕ್ಕೀಗ ಕೊರೊನಾ ನಂತರ ದಾಖಲೆ ಗಳಿಕೆ ಕಂಡು ಮೃಗಾಲಯದಲ್ಲಿ ಸಂತಸ ಮನೆ ಮಾಡಿದೆ.
ಈ ವರ್ಷದ ಕಳೆದ ಏಪ್ರಿಲ್ ನಿಂದ ಈವರೆಗೆ ಸುಮಾರು 16 ಲಕ್ಷ ಪ್ರೇಕ್ಷಕರನ್ನ ಮೃಗಾಲಯಕ್ಕೆ ಭೇಟಿ ನೀಡಿದ್ದು ಅಂದಾಜು 42 ಕೋಟಿ ಸಂಗ್ರಹವಾಗಿದೆ, ಕಳೆದ ವರ್ಷದ ಕೊರೊನಾದಿಂದ ಸೊರಗಿದ್ದ ಮೃಗಾಲಯ ಈ ವರ್ಷದಿಂದ ಚೇತರಿಕೆ ಕಂಡಿದೆ. ಅದರಲ್ಲೀ ಕಳೆದ ದಸರಾ ಹಬ್ಬ ಮತ್ತು ಈ ತಿಂಗಳ ಕ್ರಿಸ್ಮಸ್ ಹಾಗೂ ವರ್ಷಾಂತ್ಯ-ವಾರಾಂತ್ಯಕ್ಕೆ ಸಾಲು ಸಾಲು ರಜೆ ಇದ್ದಿದ್ದರಿಂದ ಮೃಗಾಲಯ್ಕಕೆ ಬೇಟಿ ನೀಡುವ ಪ್ರಾಣಿ ಪ್ರಿಯರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು ದಾಖಲೆಯ ಗಳಿಕೆ ಇನ್ನಷ್ಟು ಚೈತನ್ಯವನ್ನು ತಂದಿದೆ ಎಂದು ಮೃಗಾಲಯದ ಕಾರ್ಯನಿರ್ವಹಕ ನಿರ್ದೇಶಕ ಹೇಳಿದರು.
2022ರ ವರ್ಷಾಂತ್ಯ ದಿನದಂದು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ದಾಖಲೆ ಮಟ್ಟಕ್ಕೆ ತಲುಪಿದೆ. ಅದರಲ್ಲೂ ಶನಿವಾರ ವೀಕೆಂಡ್ ಆಗಿರುವುದರಿಂದ ಮೃಗಾಲಯ ಮತ್ತು ಸಫಾರಿಗಳತ್ತ ಮುಖ ಮಾಡಿರುವ ಬೆಂಗಳೂರಿನ ಜನತೆ, ಒಮ್ಮೆಗೇ ಮೃಗಾಲಯದತ್ತ ಧಾವಿಸಿದ್ದಾರೆ.
ಮೂರ್ನಾಲ್ಕು ದಿನದ ಹಿಂದೆಯೇ ಆನ್ಲೈನ್ ಬುಕಿಂಗ್ ಮಾಡಿಸಿರುವ ಮಂದಿಯಿಂದಲೇ ಟಿಕೆಟ್ ಭರ್ಜರಿ ಬಿಕರಿಯಾಗಿದೆ, ಅದರಲ್ಲೂ ನೇರವಾಗಿ ಬಂದಿರುವ ಪ್ರಾಣಿ ಪ್ರಿಯರು, ವಾಹನಗಳ ನಿಲ್ದಾಣಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಶನಿವಾರ ಸಂಜೆ 6ಕ್ಕೆ 14,978 ಮಂದಿ ಆಗಮಿಸಿದ್ದು ಒಂದು ದಿನದ ಆನ್ಲೈನ್, ಆಫ್ಲೈನ್ ವಹಿವಾಟು 39,80,360ರೂ ಗಳಿಕೆಯಾಗಿದೆ. ಇದರಲ್ಲಿ ವಾಹನ ನಿಲುಗಡೆ ಶುಲ್ಕ ಕಡಿತಗೊಳಿಸಲಾಗಿದ್ದು ಈ ಗಳಿಕೆ ದಾಖಲೆ ಮಟ್ಟ ತಲುಪಿದೆ.
ಕ್ರಿಸ್ಮಸ್ ಹಬ್ಬದ ನಂತರ ನಾಲ್ಕೈದು ದಿನಗಳಲ್ಲಿ 35 ಲಕ್ಷ ರೂ ಗಳಿಕೆ ಕಂಡಿದ್ದ ಉದ್ಯಾನವನ ಇಂದು ಸುಮಾರು 40 ಲಕ್ಷ ಗಳಿಸಿರುವು ಮೃಗಾಲಯದ ಸಿಬ್ಬಂದಿಗಳಿಗೆ ಮತ್ತು ಅಧಿಕಾರಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ.
ದಸರಾ ದಾಖಲೆ: ಕಳೆದ ಅಕ್ಟೋಬರ್ 5ರ ದಸರಾ ಹಬ್ಬಕ್ಕೆ 57.11 ಲಕ್ಷ ಕಲೆಕ್ಷನ್ ಆಗಿದ್ದು, ಅದರಲ್ಲಿ ವಾಹನ ನಿಲುಗಡೆ ಟೆಂಡರ್ ಕರೆಯದೆ ಮೃಗಾಲಯದವರೇ ನಿರ್ವಹಿಸಿದ್ದನ್ನು ಕೂಡಿದರೆ ಗಳಿಕೆ ಹೆಚ್ಚಾದರೂ ಅದು ಇಂದಿನ ದಾಖಲೆಗೆ ಸರಿಸಮವಾಗಿಲ್ಲವೆಂದು ಮೃಗಾಲಯದ ಕಾರ್ಯನಿರ್ವಹಣಾ ನಿರ್ದೇಶಕ ಸುನೀಲ್ ಪನ್ವಾರ್ ತಿಳಿಸಿದರು.
ವಾರದ ದಿನಗಳಲ್ಲಿ ಸೊರಗಿದ ಗಳಿಕೆ:ಸೋಮವಾರ, ಬುಧವಾರ, ಗುರುವಾರ ಮತ್ತು ಶುಕ್ರವಾದ ದಿನಗಳಲ್ಲಿ ಕೇವಲ 6-8 ಲಕ್ಷಕ್ಕೇರದ ಕಲೆಕ್ಷನ್ ವಾರಾಂತ್ಯದಲ್ಲಿ ಸಮಯದಲ್ಲಿ ಸಾಮಾನ್ಯವಾಗಿ 12-20 ಲಕ್ಷ ರೂ ಗಳಿಗೆ ಏರುತ್ತದೆ.
2021ರಲ್ಲಿ ಇಡೀ ವರ್ಷಕ್ಕೆ 24 ಕೋಟಿ:ಕಳೆದ 2021ರಲ್ಲಿ ಕೊರೊನಾದಿಂದಾಗಿ ಸಾವರ್ಜನಿಕ ಪ್ರದೇಶಗಳಿಗೆ ನಿರ್ಬಂಧ ವಿಧಿಸಲಾಗಿತ್ತು ಮತ್ತು ಸಾಂಕ್ರಮಿಕ ರೋಗಕ್ಕೆ ಹೆದರಿ ಹೆಚ್ಚು ಮಂದಿ ಪ್ರವಾಸ ಮಾಡಲು ಇಷ್ಟ ಪಡುತ್ತಿರಲಿಲ್ಲ ಅದಕ್ಕಾಗಿ ಕಳೆದ ವರ್ಷದ ಕೇವಲ 9ಲಕ್ಷ ಪ್ರೇಕ್ಷಕರ ಸೆಳೆದಿದ್ದ ಮೃಗಾಲಯ ಗಳಿಸಿದ್ದು ಮಾತ್ರ 24ಕೋಟಿಯಷ್ಟು ಇದರಿಂದ ವನ್ಯ ಜೀವಿಗಳ ಹಸಿವನ್ನೂ ತಣಿಸದೆ ಮೃಗಾಲಯವು ಸಾಕಷ್ಟು ಕಷ್ಟ ಅನುಭವಿಸಿತ್ತು ಎಂದು ಹೇಳಿದರು.
ಭಾನುವಾರ 40 ಲಕ್ಷ ಗಳಿಸುವ ವಿಶ್ವಾಸ:ಶನಿವಾರ ಮತ್ತು ಭಾನುವಾರ ಎರಡು ದಿನಗಳಲ್ಲಿ ಮೃಗಾಲಯದ ನಿರೀಕ್ಷೆ ಇನ್ನೂ ಹೆಚ್ಚಾಗುತ್ತೆ. ಆದರೆ ಶನಿವಾರವೇ 40ಲಕ್ಷಕ್ಕೆ ಟಿಕೆಟ್ ಸಂಗ್ರಹ ಗುರಿ ಮೀರಿರುವುದರಿಂದ ಭಾನುವಾರದ ಬಿಡುವಿನ ವೇಳೆ 40ಲಕ್ಷಕ್ಕೂ ಮೀರಿ ಗಳಿಕೆ ಸಂಗ್ರಹವಾಗುವ ಮಟ್ಟಕ್ಕೆ ಹೊಸ ವರ್ಷವನ್ನು ಬನ್ನೇರುಘಟ್ಟ ಮೃಗಾಲಯ ಸ್ವಾಗತಿಸಿದೆ.
ಇದನ್ನೂ ಓದಿ:ಹೊಸ ವರ್ಷಾಚರಣೆಗೆ ಕ್ಷಣಗಣನೆ.. 2023 ನ್ನು ಸ್ವಾಗತಿಸಲು ಬೆಂಗಳೂರಿನಲ್ಲಿ ಸಜ್ಜಾದ ಜನಸಾಗರ