ಬೆಂಗಳೂರು:ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 1’ ಪಡೆದ ಯಶಸ್ಸು ಈಗ ಇತಿಹಾಸ. ಈ ಒಂದು ಸಿನಿಮಾ ಯಶ್ ವೃತ್ತಿ ಜೀವನದಲ್ಲಿ ಬೇರೆ ಭಾಷೆಗಳಿಂದ ಬೇಡಿಕೆ ಸಹ ಗಿಟ್ಟಿಸಿಕೊಂಡಿದೆ. ಆದರೆ, ಅವರಿಗೆ ಪರಭಾಷಾ ಚಿತ್ರಗಳಲ್ಲಿ ಅಭಿನಯ ಮಾಡೋದಕ್ಕೆ ಸಮಯವಿಲ್ಲವಂತೆ
ಸಂತು ಸ್ಟೇಟ್ ಫಾರ್ವರ್ಡ್ ಚಿತ್ರ ತಮಿಳು ಭಾಷೆಯಲ್ಲಿ ತೆರೆ ಕಾಣಲಿದೆ ಅದಕ್ಕೆ ಪರಭಾಷೆಯವರು ಯಶ್ ಅವರ ಅಭಿನಯದ ಹಿಂದಿನ ಸಿನಿಮಾ ಡಬ್ಬಿಂಗ್ ರೈಟ್ಸ್ ಪಡೆಯಲು ಮುಂದಾಗಿದ್ದಾರೆ. ನಮ್ಮ ಕನ್ನಡ ಭಾಷೆಗೆ ಹೇಗೆ ಹಳೆಯ ತಮಿಳು ಸಿನಿಮಾಗಳು ಡಬ್ ಆಗಿ ತೆರೆಯ ಮೇಲೆ ಬಂದವೋ, ಅದೇ ರೀತಿ ಈಗ ತಮಿಳು ಭಾಷೆಯಲ್ಲಿ ಕನ್ನಡ ಸಿನಿಮಾಗಳು ಆದ್ಯತೆ ಗಿಟ್ಟಿಸಿಕೊಳ್ಳುತ್ತಿವೆ.
ಈಗ ಯಾಕೆ ಈ ವಿಷಯ ಅಂತಿರಾ, ಯಶ್ ಹಾಗೂ ರಾಧಿಕಾ ಪಂಡಿತ್ ಅಭಿನಯದ ಕೆ ಮಂಜು ನಿರ್ಮಾಣದ ‘ಸಂತು ಸ್ಟೇಟ್ ಫಾರ್ವರ್ಡ್’ ಚಿತ್ರ ತಮಿಳು ಭಾಷೆಗೆ ಡಬ್ಬಿಂಗ್ ಆಗುತ್ತಿದೆ. ಈ ಚಿತ್ರವನ್ನ 2016ರಲ್ಲಿ ಮಹೇಶ್ ರಾವ್ ನಿರ್ದೇಶನದಲ್ಲಿ ಸೆಟ್ಟೇರಿತ್ತು. ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿದ್ದವು.
ಯಶ್ ಅಭಿನಯದ ‘ಸಂತು ಸ್ಟೇಟ್ ಫಾರ್ವರ್ಡ್’ ಸಿನಿಮಾಕ್ಕೆ ತಮಿಳಿನಲ್ಲಿ ಸೂರ್ಯವಂಶಿ ಎಂದು ನಾಮಕರಣ ಮಾಡಲಾಗಿದ್ದು, ತಮಿಳಿಗೆ ಡಬ್ ಮಾಡಿ ಬಿಡುಗಡೆಯಾಗುತ್ತಿದೆ. ಇದಕ್ಕೆ ಬೇಡಿಕೆ ಜೊತೆಗೆ ಮತ್ತೊಂದು ಕಾರಣ ಅಂದರೆ, ಆ ಸಿನಿಮಾದಲ್ಲಿ ಯಶ್ ಪಾತ್ರಕ್ಕೆ ಟಕ್ಕರ್ ಕೊಡುವ ಪಾತ್ರದಲ್ಲಿ ತಮಿಳು ನಟ ಶಾಮ್ ದೇವ ಪಾತ್ರದಲ್ಲಿ ಅಭಿನಯಿಸಿದ್ದಾರೆ.