ಕರ್ನಾಟಕ

karnataka

ETV Bharat / state

ನೌಕಾಪಡೆ ಅಧಿಕಾರಿಯಾಗಿ ಯಶ್ ನಟನೆ?.. ರಾಕಿ ಭಾಯ್​ ಆಪ್ತರಿಂದ ಹೊರಬಿತ್ತು ಸ್ಪಷ್ಟನೆ - yash playing navy officer

ಕೆಲ ದಿನಗಳ ಹಿಂದೆ ಯಶ್ ಮುಂದಿನ ಪ್ರಾಜೆಕ್ಟ್, ಮುಫ್ತಿ ಸಿನಿಮಾ ನಿರ್ದೇಶಕ ನರ್ತನ್ ಜೊತೆ ಅಂತಾ ಹೇಳಲಾಗಿತ್ತು. ಅಷ್ಟೇ ಅಲ್ಲ, ಇದು ಯಶ್ ಅವರ 19ನೇ ಸಿನಿಮಾ ಆಗಲಿದೆ, ಚಿತ್ರಕಥೆ ಚರ್ಚೆಯ ಹಂತದಲ್ಲಿದೆ, ಸಿನಿಮಾದಲ್ಲಿ ಯಶ್ ನೌಕಾಪಡೆ ಅಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆದ್ರೆ ಇದಕ್ಕೆ ಈಗ ತೆರೆ ಬಿದ್ದಿದೆ. ಅವರು ನೌಕಾಪಡೆ ಅಧಿಕಾರಿಯಾಗಿ ನಟಿಸುತ್ತಿಲ್ಲ ಎಂಬುದನ್ನು ರಾಕಿ ಭಾಯ್​ ಆಪ್ತರು ಸ್ಪಷ್ಟಪಡಿಸಿದ್ದಾರೆ.

yash
ರಾಕಿಂಗ್ ಸ್ಟಾರ್ ಯಶ್

By

Published : Jun 19, 2021, 6:50 PM IST

Updated : Jun 19, 2021, 7:09 PM IST

ಕೆಜಿಎಫ್ ಕನ್ನಡ ಚಿತ್ರರಂಗ ಅಷ್ಟೇ ಅಲ್ಲದೇ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಈ ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ ಯಶ್ ಸೌತ್ ಸ್ಟಾರ್ ಆಗಿ ಹೊರ ಹೊಮ್ಮಿದ್ದು ಈಗ ಇತಿಹಾಸ. ಸದ್ಯ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಳಿಕ, ಯಶ್ ಯಾವ ನಿರ್ದೇಶಕ ಹಾಗೂ ಯಾವ ಬ್ಯಾನರ್ ಮತ್ತು ಎಷ್ಟು ಭಾಷೆಗಳಲ್ಲಿ ಸಿನಿಮಾ ಮಾಡ್ತಾರೆ ಅನ್ನೋದು ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಕೇಳಿ ಬರುತ್ತಿರುವ ಕುತೂಹಲದ ಪ್ರಶ್ನೆ.

ರಾಕಿಂಗ್ ಸ್ಟಾರ್ ಯಶ್

ಈ ಹಿಂದೆಯೇ ಯಶ್ ಟಾಲಿವುಡ್ ನಿರ್ಮಾಪಕರು ಮತ್ತು ಸ್ಯಾಂಡಲ್​​ವುಡ್ ನಿರ್ದೇಶಕನ ಜೊತೆ ಸಿನಿಮಾ ಮಾಡ್ತಾರೆ, ಅದು ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದು ಗಾಂಧಿನಗರದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಬಗ್ಗೆ ಯಶ್ ಕೂಡ ಮೊದಲು ಕೆಜಿಎಫ್ ಚಾಪ್ಟರ್- 2, ಅದು ಮುಗಿದ ಮೇಲೆ ಮುಂದಿನ ಸಿನಿಮಾ ಯೋಚನೆ ಅಂತಾ ಹೇಳಿದ್ರು.

ಕೆಲ ದಿನಗಳ ಹಿಂದೆ ಯಶ್ ಮುಂದಿನ ಪ್ರಾಜೆಕ್ಟ್, ಮುಫ್ತಿ ಸಿನಿಮಾ ನಿರ್ದೇಶಕ ನರ್ತನ್ ಜೊತೆ ಅಂತಾ ಹೇಳಲಾಗಿತ್ತು. ಅಷ್ಟೇ ಅಲ್ಲ, ಇದು ಯಶ್ ಅವರ 19ನೇ ಸಿನಿಮಾ ಆಗಲಿದೆ, ಚಿತ್ರಕಥೆ ಚರ್ಚೆಯ ಹಂತದಲ್ಲಿದೆ, ಸಿನಿಮಾದಲ್ಲಿ ಯಶ್ ನೌಕಾಪಡೆ ಅಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು.

ರಾಕಿಂಗ್ ಸ್ಟಾರ್ ಯಶ್

ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಯಶ್ ಅಭಿಮಾನಿಗಳು ಸಂತಸಗೊಂಡಿದ್ದರು. ಈ ಸಿನಿಮಾದಲ್ಲಿ ನಟಿ ತಮನ್ನಾ ಭಾಟಿಯಾ ಕೂಡ ನಟಿಸಲಿದ್ದಾರೆ ಎಂಬ ಸುದ್ದಿಯು ಹರಿದಾಡಿತ್ತು. ಆದರೆ ಈ ವಿಷಯ ಸುಳ್ಳು ಎನ್ನಲಾಗ್ತಿದೆ. ರಾಕಿ ಬಾಯ್ ಆಪ್ತರು ಹೇಳುವ ಪ್ರಕಾರ ಯಶ್, ನಿರ್ದೇಶಕ ನರ್ತನ್ ಜೊತೆ ಸಿನಿಮಾ ಮಾಡೋದು ಪಕ್ಕಾ, ಆದರೆ ನೇವಿ ಆಫೀಸರ್ ಕಥೆಯಲ್ಲ ಎಂದಿದ್ದಾರೆ.

ಯಶ್ ಸದ್ಯ ಕೆಜಿಎಫ್ 2 ಸಿನಿಮಾ ಕಡೆ ತಮ್ಮ ಗಮನ ಹರಿಸುತ್ತಿದ್ದಾರೆ. ಹೀಗಾಗಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಅಧಿಕೃತವಾಗಿ ಸೂಕ್ತ ಸಮಯದಲ್ಲಿ ಘೋಷಣೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಪ್ಯಾನ್ ಇಂಡಿಯಾ, ಕೆಜಿಎಫ್ ಚಾಪ್ಟರ್ 2 ಸಿನಿಮಾ ಹೊಂಬಾಳೆ ಫಿಲ್ಮ್ ನಿರ್ಮಾಪಕ ವಿಜಯ್ ಕಿರಂಗದೂರ್, ಅದ್ಧೂರಿ ಬಜೆಟ್​ನಲ್ಲಿ ನಿರ್ಮಾಣ ಮಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್

ಯಾವಾಗ ಕೆಜಿಎಫ್ -2 ಸಿನಿಮಾ ರಿಲೀಸ್ ಆಗುತ್ತೆ ಅಂತಾ ಕಾಯುತ್ತಿದ್ದ ಅಭಿಮಾನಿಗಳಿಗೆ, ಜುಲೈ 16 ರಂದು ವರ್ಲ್ಡ್​ ವೈಡ್ ರಿಲೀಸ್ ಆಗಲಿದೆ ಅಂತಾ ಹೇಳಲಾಗಿತ್ತು. ಆದರೆ ಕೊರೊನಾ ಎರಡನೇ ಅಲೆಯಿಂದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಜುಲೈ 16ರಂದು ರಿಲೀಸ್ ಆಗೋದು ಡೌಟ್ ಎನ್ನಲಾಗುತ್ತಿದೆ. ಹೀಗಾಗಿ ಹೊಂಬಾಳೆ ಫಿಲ್ಮ್ ಯಾವಾಗ ಈ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟಿಸುತ್ತೆ ಅನ್ನೋದನ್ನು ಕಾದು ನೋಡಬೇಕು.

Last Updated : Jun 19, 2021, 7:09 PM IST

ABOUT THE AUTHOR

...view details