ಕರ್ನಾಟಕ

karnataka

ETV Bharat / state

ಸಿಲಿಕಾನ್ ಸಿಟಿಯಲ್ಲಿ "ರಕ್ತರಾತ್ರಿ ಅಶ್ವತ್ಥಾಮ"ನಾಗಿ ಅಬ್ಬರಿಸಿದ ಗುಂಡಿಮಜಲು

ಟಿ.ದಾಸರಹಳ್ಳಿಯ ಯೋಗಕೇಂದ್ರದಲ್ಲಿ ಶ್ರೀ ಪಾಂಚಜನ್ಯ ಯಕ್ಷಗಾನ ಕಲಾತಂಡ ಹಾಗೂ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಮೇಳದಿಂದ "ಮಹಿಷ ಮರ್ದಿನಿ" ಹಾಗೂ "ರಕ್ತರಾತ್ರಿ" ಪ್ರಸಂಗ ಏರ್ಪಡಿಸಲಾಗಿತ್ತು. ಈ ವೇಳೆ ಗುಂಡಿಮಜಲು ಗೋಪಾಲಕೃಷ್ಣ ಭಟ್ಟರ ಅಮೋಘ ಪ್ರದರ್ಶನವನ್ನು ಜನರು ಕಣ್ತುಂಬಿಕೊಂಡರು.

Yakshagana programme

By

Published : Sep 9, 2019, 9:14 AM IST

ಬೆಂಗಳೂರು:ಟಿ. ದಾಸರಹಳ್ಳಿಯ ಯೋಗಕೇಂದ್ರದಲ್ಲಿ ನಡೆದ ಯಕ್ಷಗಾನದಲ್ಲಿ ಗುಂಡಿಮಜಲು ಗೋಪಾಲಕೃಷ್ಣ ಭಟ್ಟರ ನಟನೆ ಸಿಲಿಕಾನ್ ಸಿಟಿಯ ಜನರನ್ನು ನಿಬ್ಬೆರಗಾಗಿಸಿತು.

ಯಕ್ಷಗಾನದಲ್ಲಿ ಗುಂಡಿಮಜಲು ಗೋಪಾಲಕೃಷ್ಣ ಭಟ್ಟರು

ಟಿ.ದಾಸರಹಳ್ಳಿಯ ಯೋಗಕೇಂದ್ರದಲ್ಲಿ ಶ್ರೀ ಪಾಂಚಜನ್ಯ ಯಕ್ಷಗಾನ ಕಲಾತಂಡ ಹಾಗೂ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಮೇಳದಿಂದ "ಮಹಿಷ ಮರ್ದಿನಿ" ಹಾಗೂ "ರಕ್ತರಾತ್ರಿ" ಪ್ರಸಂಗ ಏರ್ಪಡಿಸಲಾಗಿತ್ತು. ಈ ವೇಳೆ ಗುಂಡಿಮಜಲು ಗೋಪಾಲಕೃಷ್ಣ ಭಟ್ಟರ ಅಮೋಘ ಪ್ರದರ್ಶನವನ್ನು ಜನರು ಕಣ್ತುಂಬಿಕೊಂಡರು.

ಅಭಿಮನ್ಯು, ಬಬ್ರುವಾಹನ, ದೇವಿಮಹಾತ್ಮೆಯ ಚಂಡ ಮೊದಲಾದ ವೀರಾವೇಶ ಪಾತ್ರಗಳನ್ನು ಕಂಡ ಪ್ರೇಕ್ಷಕರು ಗೋಪಾಲ ಕೃಷ್ಣರ ಪ್ರತಿಭೆಗೆ ಮರುಳಾಗದೆ ಇರುವುದಿಲ್ಲ. ಇವರು ಕಟೀಲು, ಧರ್ಮಸ್ಥಳದಂತಹ ಪ್ರಮುಖ ಮೇಳಗಳಲ್ಲಿ ದುಡಿದ ಕಲಾವಿದರಾಗಿದ್ದು, ತಮ್ಮ ಅರವತ್ತರ ಹರೆಯದಲ್ಲೂ ಯುವಕರಂತೆ ಕುಣಿಯುತ್ತಾರೆ.

ಈ ಕಾರ್ಯಕ್ರಮದಲ್ಲಿ ಗೋಪಾಲ ಕೃಷ್ಣಭಟ್ಟರಿಗೆ "ಯಕ್ಷ ಸಂಜೀವಿನಿ" ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ABOUT THE AUTHOR

...view details