ಬೆಂಗಳೂರು: ರಾಜ್ಯದಲ್ಲಿ ಶಾಲೆಗಳನ್ನು ಯಾವಾಗ ಪುನಾರಂಭ ಕುರಿತಂತೆ ಮಹತ್ವದ ನಿರ್ಧಾರವನ್ನ ಸೋಮವಾರ(ನಾಳೆ) ಸಿಎಂ ಬಿ.ಎಸ್. ಯಡಿಯೂರಪ್ಪ ಕೈಗೊಳ್ಳಲಿದ್ದಾರೆ.
ರಾಜ್ಯದಲ್ಲಿ ಶಾಲೆಗಳ ಪುನಾರಂಭದ ಬಗ್ಗೆ ನಾಳೆ ಅಂತಿಮ ನಿರ್ಧಾರ - ಶಾಲೆಗಳ ಪುನರಾರಂಭ ಕುರಿತು ಸಿಎಂ ಅಂತಿಮ ಸಭೆ
ಕೊರೊನಾ ಬಿಕ್ಕಟ್ಟಿನ ಹಿನ್ನೆಲೆ ಬಂದ್ ಆಗಿರುವ ಶಾಲೆಗಳನ್ನು ಪುನಾರಂಭಿಸಬೇಕೋ, ಬೇಡವೋ ಎಂಬುದರ ಕುರಿತು ನಾಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಹತ್ವದ ಸಭೆ ನಡೆಸಲಿದ್ದಾರೆ. ಶಾಲೆ ಪುನಾರಂಭದ ಕುರಿತ ಅಂತಿಮ ನಿರ್ಧಾರ ನಾಳೆಯೇ ಹೊರಬೀಳಲಿದೆ.
![ರಾಜ್ಯದಲ್ಲಿ ಶಾಲೆಗಳ ಪುನಾರಂಭದ ಬಗ್ಗೆ ನಾಳೆ ಅಂತಿಮ ನಿರ್ಧಾರ yadiyurappa to held meeting tommorow on schools reopen issue](https://etvbharatimages.akamaized.net/etvbharat/prod-images/768-512-9622871-thumbnail-3x2-new.jpg)
ನಾಳೆ ಮಧ್ಯಾಹ್ನ 12 ಗಂಟೆಗೆ ಈ ಸಂಬಂಧ ಪ್ರಮುಖ ಸಭೆ ನಡೆಯಲಿದೆ. ರಾಜ್ಯದಲ್ಲಿ ಶಾಲೆಗಳನ್ನು ಪುನಾರಂಭಿಸುವ ಬಗ್ಗೆ ಮುಖ್ಯಮಂತ್ರಿ ಅವರು ಮಹತ್ವದ ಸಭೆ ಕರೆದಿದ್ದು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಮತ್ತು ಇಲಾಖೆಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಶಾಲೆಗಳ ಪುನಾರಂಭಕ್ಕೆ ಸಂಬಂಧಿಸಿದಂತೆ ವರದಿ ಸಿದ್ಧಪಡಿಸಿ ಇಲಾಖೆಯ ಆಯುಕ್ತ ಅನ್ಬಕುಮಾರ್ ಸಚಿವರಿಗೆ ನೀಡಿದ್ದಾರೆ. ಈ ವರದಿಯನ್ನು ಸಚಿವ ಸುರೇಶ್ ಕುಮಾರ್ ಸಿಎಂ ಮುಂದಿಡುತ್ತಾರೆ. ವರದಿಯಲ್ಲಿ ಪೋಷಕರು, ವಿದ್ಯಾರ್ಥಿಗಳು, ಶಾಲಾ ಆಡಳಿತ ಮಂಡಳಿಗಳು, ಶಿಕ್ಷಕರು ನೀಡಿದ ಅಭಿಪ್ರಾಯಗಳು ಇವೆ. ಡಿಸೆಂಬರ್ ಎರಡನೇ ವಾರದಿಂದ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತರಗತಿ ಪ್ರಾರಂಭಿಸಬಹುದು ಎಂದು ಇದೇ ನವೆಂಬರ್ 9ರಂದು ಶಿಫಾರಸು ಮಾಡಿದ್ದು, ನಾಳೆ ಈ ಕುರಿತ ಅಂತಿಮ ಚಿತ್ರಣ ದೊರೆಯಲಿದೆ.