ಕರ್ನಾಟಕ

karnataka

ETV Bharat / state

ಮುಂದಿನ 14 ದಿನ ಮಹತ್ವದ ಸಮಯ...ಲಾಕ್​​ಡೌನ್ ಪಾಲನೆ ಕಡ್ಡಾಯ: ಸಿಎಂ ಬಿಎಸ್​​​ವೈ - ಲಾಕ್​​ಡೌನ್ ಆದೇಶ ಪಾಲಿಸುವಂತೆ ಸಿಎಂ ಮನವಿ

ಕೊರೊನಾ ವೈರಸ್​​ ನಿಯಂತ್ರಿಸುವಲ್ಲಿ ಮುಂದಿನ 14 ದಿನಗಳು ಬಹಳ ಮಹತ್ವದ್ದಾಗಿದ್ದು,ಜನರು ಮನೆಯಿಂದ ಹೊರಬರದೇ ಲಾಕ್​​ಡೌನ್​ ಆದೇಶ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸಿಎಂ ಮನವಿ ಮಾಡಿದ್ದಾರೆ.

yadiyurappa requesting people to follow lockdown properly
ಸಿಎಂ ಬಿ.ಎಸ್​. ಯಡಿಯೂರಪ್ಪ ಮನವಿ

By

Published : Apr 1, 2020, 11:51 AM IST

ಬೆಂಗಳೂರು:ಕೋವಿಡ್-19 ವಿರುದ್ಧ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು,ಇನ್ನೂ 14 ದಿನ ಮಹತ್ವದ ಸಮಯವಾಗಿದೆ. ಹೀಗಾಗಿ ಈ ವೇಳೆ ಎಲ್ಲರೂ ಮನೆಯಲ್ಲಿಯೇ ಇದ್ದು ಲಾಕ್​ಡೌನ್ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ರಾಜ್ಯದ ಜನತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಸಿಎಂ ಬಿ.ಎಸ್​. ಯಡಿಯೂರಪ್ಪ ಮನವಿ

ಇಡೀ ಜಗತ್ತನ್ನೇ ಕಾಡುತ್ತಿರುವ ಮಹಾಮಾರಿ ಕೋವಿಡ್-19 ತಡೆಗೆ ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಲಾಕ್​​​​ಡೌನ್ ಘೋಷಿಸಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ. ಅದರಂತೆ ರಾಜ್ಯದಲ್ಲಿ ಕೂಡ ಕ್ರಮ ಕೈಗೊಳ್ಳಲಾಗುತ್ತಿದೆ,ರಾಜ್ಯದ ಜನ ಕೂಡ ಬಹುತೇಕ ಲಾಕ್ ಡೌನ್ ಪಾಲನೆ ಮಾಡುತ್ತಿದ್ದಾರೆ. ಹೀಗಾಗಿ ಸೋಂಕಿತರ ಸಂಖ್ಯೆಯಲ್ಲಿ ದೇಶದಲ್ಲಿ ಮೂರನೇ ಸ್ಥಾ‌ನದಲ್ಲಿದ್ದ ರಾಜ್ಯ ಈಗ ಐದನೇ ಸ್ಥಾನಕ್ಕೆ ಬಂದಿದೆ. ಈ ಮಹಾಮಾರಿಯನ್ನು ನಿಯಂತ್ರಿಸಲು ಇನ್ನು 14 ದಿನಗಳ ಕಾಲ ಲಾಕ್ ಡೌನ್ ನಿಯಮ ಪಾಲನೆ ಮಾಡುವುದು ಕಡ್ಡಾಯವಾಗಿದ್ದು, ಯಾರೂ ಮನೆಯಿಂದ ಹೊರಬರದಿರುವ ಮೂಲಕ ಸೋಂಕು ಹರಡದಂತೆ ಎಚ್ಚರ ವಹಿಸಬೇಕೆಂದು ರಾಜ್ಯದ ಜನತೆಗೆ ಸಿಎಂ ಮನವಿ ಮಾಡಿದ್ದಾರೆ.ಮನೆಯಲ್ಲಿ ಸ್ವಚ್ಛತೆ,ನೈರ್ಮಲ್ಯ ಕಾಪಾಡಿ,ಸಾಮಾಜಿಕ‌ ಅಂತರ ಕಾಯ್ದುಕೊಳ್ಳಿ , ಆರೋಗ್ಯ ಸರಿಯಾಗಿ ನೋಡಿಕೊಳ್ಳಿ, ರೋಗ ಲಕ್ಷಣಗಳು ಕಂಡುಬಂದರೆ ಸಮೀಪದ ಚಿಕಿತ್ಸಾ ಕೇಂದ್ರಕ್ಕೆ ಹೋಗಿ ತಪಾಸಣೆ ಮಾಡಿಸಿಕೊಳ್ಳಿ, ಕೊರೊನಾ‌ ಹೋಗಲಾಡಿಸಲು‌ ಸರ್ಕಾರದ ಜೊತೆ ಎಲ್ಲರೂ ಕೈಜೋಡಿಸಬೇಕು, ಸರ್ಕಾರದ ಸಲಹೆ,ಸೂಚನೆ ಪಾಲನೆ ಮಾಡಬೇಕು ಎಂದು ಸಿಎಂ ಕರೆ ನೀಡಿದ್ದಾರೆ.

ABOUT THE AUTHOR

...view details