ಕರ್ನಾಟಕ

karnataka

ETV Bharat / state

ರಾಜ್ಯಪಾಲ ಗೆಹ್ಲೋಟ್‌ ಭೇಟಿ ಮಾಡಿ ಮಾತುಕತೆ ನಡೆಸಿದ ಯಡಿಯೂರಪ್ಪ - ಈಟಿವಿ ಭಾರತ್​ ಕನ್ನಡ

ಕೇಂದ್ರ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣೆ ಸಮಿತಿ ಸದಸ್ಯರಾಗಿ ಬಿ ಎಸ್​​ ಯಡಿಯೂರಪ್ಪ ಅವರನ್ನು ನಿನ್ನೆ ಬಿಜೆಪಿ ವರಿಷ್ಠ ನಾಯಕರು ನೇಮಕ ಮಾಡಿದ್ದರು.

KN_BNG_06_BSY_GOVERNOR_MEET_SCRIPT_7208080
ರಾಜ್ಯಪಾಲರನ್ನು ಭೇಟಿಯಾದ ಯಡಿಯೂರಪ್ಪ

By

Published : Aug 18, 2022, 5:46 PM IST

ಬೆಂಗಳೂರು: ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾಗಿ ನೇಮಕಗೊಂಡ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರಿಂದು ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದು, ಕೆಲಕಾಲ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಯಡಿಯೂರಪ್ಪಗೆ ರಾಜ್ಯಪಾಲರು ಅಭಿನಂದನೆ ಸಲ್ಲಿಸಿದ್ದಾರೆ.

ಬಿಎಸ್​ವೈಗೆ ಸನ್ಮಾನ

ಬೆಂಬಲಿಗರಿಂದ ಸನ್ಮಾನ:ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಸಚಿವರಾದ ಶಂಕರ್ ಮುನೇನಕೊಪ್ಪ, ಬಿಡಿಎ ಅಧ್ಯಕ್ಷ ವಿಶ್ವನಾಥ್, ಸಚಿವರಾದ ಬೈರತಿ ಬಸವರಾಜ್ ಸೇರಿದಂತೆ ಇತರ ಮುಖಂಡರು ಕಾವೇರಿ ನಿವಾಸದಲ್ಲಿ ಯಡಿಯೂರಪ್ಪ ಅವರನ್ನು‌ ಭೇಟಿ ಮಾಡಿ, ಸನ್ಮಾನಿಸಿದ್ದಾರೆ.

ಇದನ್ನೂ ಓದಿ:ಬಿಜೆಪಿಯಲ್ಲಿ ಬಿಗ್ ಎಲೆಕ್ಷನ್ ಸ್ಟ್ರಾಟಜಿ: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಹೈಕಮಾಂಡ್

ABOUT THE AUTHOR

...view details